ಪಟನಾ: ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಬಿಹಾರದಲ್ಲಿ ಜೆಡಿಯು-ಆರ್‍ಜೆಡಿ ನಡುವೆ ಬಿರುಕು ಮೂಡುತ್ತಿದೆಯೇ ಇಂತಹುದೊಂದು ಪ್ರಶ್ನೆ ಈಗ ಮೂಡಿದೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನಿತೀಶ್ ಕುಮಾರ್‍ರತ್ತ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಬೊಟ್ಟು ಮಾಡಿ ತೋರಿಸಿದ ಬೆನ್ನಲ್ಲೇ ಪಕ್ಷದ ಮತ್ತೊಬ್ಬ ನಾಯಕ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಎಂಜಿನಿಯರ್‍ಗಳ ಹತ್ಯೆಯು ರಾಜ್ಯದ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬು ದನ್ನು ಸೂಚಿಸುತ್ತಿದೆ.
ಚಾಲಕನ ಸೀಟಿನಲ್ಲಿ ಕುಳಿತಿರುವ ನಿತೀಶ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಆರ್‍ಜೆಡಿ ಉಪಾಧ್ಯಕ್ಷ ರಘುವಂಶ್‍ಪ್ರಸಾದ್ ಸಿಂಗ್ ಹೇಳಿದ್ದಾರೆ.