ಸುಷ್ಮಾ ಸ್ವರಾಜ್, ಕ್ಸಿ ಜಿನ್‌ಪಿಂಗ್ 
ದೇಶ

ಸುಷ್ಮಾರ ಚೀನಾ ಪ್ರವಾಸ: ಅಧ್ಯಕ್ಷ ಕ್ಸಿರೊಂದಿಗೆ ಭಾರತ-ಚೀನಾ ಒಪ್ಪಂದಗಳ ಕುರಿತು ಚರ್ಚೆ

ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೋಮವಾರ ಆದರದಿಂದ ಬರ ಮಾಡಿಕೊಂಡರು.

ಬಿಜೀಂಗ್: ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೋಮವಾರ ಆದರದಿಂದ ಬರ ಮಾಡಿಕೊಂಡರು.

ನಾಲ್ಕು ದಿನಗಳ ಚೀನಾ ಪ್ರವಾಸದಲ್ಲಿರುವ ಸುಷ್ಮಾ ಅವರನ್ನು ಬಿಜೀಂಗ್ನ ಗ್ರೇಟ್‌ ಹಾಲ್‌ ಆಫ್ ದ ಪೀಪಲ್‌ ಕಟ್ಟಡದಲ್ಲಿ ಸ್ವಾಗತಿಸಿದ ಕ್ಸಿ, ತಮ್ಮ ಭಾರತ ಭೇಟಿಯನ್ನು ಸ್ಮರಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ತಮ್ಮ ನಡುವೆ ಏರ್ಪಟ್ಟಿರುವ ಒಪ್ಪಂದಗಳ ಅನುಷ್ಠಾನ ಹಾಗೂ ಪರಸ್ಪರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ  ಚೀನಾ–ಭಾರತ ದಿಟ್ಟ ಹೆಜ್ಜೆ ಇಟ್ಟಿವೆ. ‘ಈ ವರ್ಷ ದ್ವಿಪಕ್ಷೀಯ ಸಂಬಂಧಗಳಲ್ಲಿ ಉತ್ತಮ ಪ್ರಗತಿ ದಾಖಲಾಗಲಿದೆ ಎಂದು ನಾನು ನಂಬುತ್ತೇನೆ ಕ್ಸಿ ಜಿನ್‌ಪಿಂಗ್ ಹೇಳಿದರು.

ಕಳೆದ ಸೆಪ್ಟಂಬರ್‌ನಲ್ಲಿ ತಮ್ಮ ಭಾರತ ಭೇಟಿಯ ಬಳಿಕ ಉಭಯ ರಾಷ್ಟ್ರಗಳ ಸಂಬಂಧಗಳು ಹೊಸ ಆಯಾಮ ಪಡೆದುಕೊಂಡಿದೆ ಎಂದರು. ಅಲ್ಲದೆ ತಮ್ಮ ಭಾರತ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ನೀಡಿದ ಆತಿಥ್ಯವನ್ನು ಕ್ಸಿ ಜಿನ್ ಪಿಂಗ್ ಕೊಂಡಾಡಿದ್ದಾರೆ.

ಕ್ಸಿ ಅವರ ಆದರದ ಮಾತುಗಳಿಗೆ ತಲೆಭಾಗಿದ ಸುಷ್ಮಾ ಅವರು, ಮುಂದಿನ ತಿಂಗಳು ಆರಂಭಗೊಳ್ಳಲಿರುವ ಸೃಜನಶೀಲತೆ ಹಾಗೂ ನಾವೀನ್ಯ ವರ್ಷ ಎಂದು ಕರೆಯುವ ಚೀನಾದ  ಲೂನಾರ್ ಇಯರ್ ಆಫ್ ಶೀಪ್‌ಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ್ದಾರೆ ಎಂದರು.

ಅಂದಹಾಗೆ, ಚೀನಾ ಅಧ್ಯಕ್ಷರು ವಿದೇಶಾಂಗ ಸಚಿವರನ್ನು ಸ್ವಾಗತಿಸುವುದು ತುಂಬಾನೇ ವಿರಳ. ಭಾರತದ ಬಗೆಗಿನ ಸ್ನೇಹದ ಪ್ರತೀಕವಾಗಿ  ಕ್ಸಿ ಅವರು ಸುಷ್ಮಾ ಅವರನ್ನು ಸ್ವಾಗತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT