ದೇಶ

ಭಾರತ ಸಹಿಷ್ಣು ರಾಷ್ಟ್ರ: ಜೇಟ್ಲಿ

Rashmi Kasaragodu

ನವದೆಹಲಿ: ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲವೇ ಇಲ್ಲ. ನಾವು ಧರ್ಮ ಸಹಿಷ್ಣುಗಳು ಎಂಬ ಬಗ್ಗೆ ಉತ್ತಮ ಉದಾಹರಣೆ ಎಂದರೆ, ಒಬಾಮಾ ಎದುರು ದಲೈಲಾಮ ಕುಳಿತುಕೊಂಡಿರುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. `ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ತೀರಾ ಇದೆ. ಭಾರತ ಪ್ರವಾಸ ವೇಳೆ ನಾನು, ಮಿಷೆಲ್ ನೋಡಿದ್ದೇವೆ. ಇಂದು ಏನಾದರೂ ಗಾಂಧೀಜಿ ಇದ್ದಿದ್ದರೆ ಗಾಬರಿಗೊಳ್ಳುತ್ತಿದ್ದರು ಎಂದು ಟೀಕೆ  ಮಾಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಾರತ ಈ ಮೂಲಕ ತಿರುಗೇಟು ನೀಡಿದೆ. ಟಿಬಿಟಿಯನ್ ನಾಯಕ ದಲೈಲಾಮಾ ಅವರನ್ನು ಚೀನಾ ಗಡಿಪಾರು ಮಾಡಿದ್ದಾಗ ಅವರಿಗೆ ಆಶ್ರಯ ಕೊಟ್ಟಿದ್ದು ಭಾರತ. ಅವರು ಭಾರತದಲ್ಲಿ 1959ರಿಂದ ನೆಲೆಸಿದ್ದಾರೆ. ಧಾರ್ಮಿಕ ಸಹಿಷ್ಣುತೆ ಬಗ್ಗೆ ಭಾರತಕ್ಕೆ ಆಳವಾದ ಇತಿಹಾಸ ಇದೆ. ಯಾವುದೇ ಘಟನೆಗಳು ಭಾರತದ ಅಸಹಿಷ್ಣು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಬಾಮ ಹೇಳಿಕೆಗೆ ಪ್ರತಿಪಕ್ಷ ಗಳಿಂದ ಭಾರಿ ಪ್ರತಿಕ್ರಿಯೆ  ವ್ಯಕ್ತವಾಗಿದ್ದು, ಬಿಜೆಪಿ ಸರ್ಕಾರದ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಒಬಾಮ ಮತ್ತು ಪ್ರಧಾನಿ ಮೋದಿ ಉತ್ತಮ ಸ್ನೇಹಿತರಾಗಿದ್ದರಿಂದ ಈ ಹೇಳಿಕೆಗೆ ಪ್ರಧಾನಿ ಉತ್ತರಿಸಬೇಕು ಎಂದು ಆಪ್ ನಾಯಕ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಹ ಕೇಂದ್ರವನ್ನು ತಿವಿದಿದೆ.

SCROLL FOR NEXT