ವಾಷಿಂಗ್ಟನ್: ಅಲ್‌ಖೈದಾ ಉಗ್ರರಿಬ್ಬರನ್ನು ಮರಣ ದಂಡನೆಗೆ ಗುರಿಪಡಿಸಿದ ನಂತರ ಇದೀಗ ಇಸಿಸ್ ಉಗ್ರರು ಅಮೆರಿಕದ ಮಹಿಳಾ ಒತ್ತೆಯಾಳು ಹತ್ಯೆಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ 2013ರಲ್ಲಿ ಅಮೆರಿಕದ ಸಾಮಾಜಿಕ ಕಾರ್ಯಕರ್ತೆ ಮಾನವೀಯ ಸಂಘಟನೆಯ ಸದಸ್ಯೆ ಕೇಲಾ ಮುಲ್ಲರ್‌ಳನ್ನು ಒತ್ತೆಯಾಗಿರಿಸಿಕೊಂಡಿದ್ದ ರಕ್ಕಾದಲ್ಲಿನ ಕಟ್ಟಡವು ಜೋರ್ಡಾನ್ ವೈಮಾನಿಕ ದಾಳಿ ವೇಳೆ ಧ್ವಂಸವಾಗಿದ್ದು , ಅದರಲ್ಲಿ ಮುಲ್ಲರ್ ಕೂಡ ಮೃತಪಟ್ಟಿದ್ದಾಳೆ ಎಂದು ಅಂತರ್ಜಾಲ ಸಂದೇಶವೊಂದರಲ್ಲಿ ಹೇಳಲಾಗಿದೆ.
ಈ ಜೋರ್ಡಾನ್ ವೈಮಾನಿಕ ದಾಳಿಗೆ ಕಟ್ಟಡದಲ್ಲಿದ್ದ ಅಮೆರಿಕ ಮಹಿಳಾ ಒತ್ತೆಯಾಳು ಮುಲ್ಲರ್ ಮಾತ್ರ ಸಾವನ್ನಪ್ಪಿದ್ದು , ಯಾವುದೇ ಜಿಹಾದಿಗಳೂ ಮೃತಪಟ್ಟಿಲ್ಲ ಮತ್ತು ಗಾಯಗೊಂಡಿಲ್ಲ. ಅಲ್ಲಾಹುವಿನ ದಯದಿಂದ ಯಾವುದೇ ಮುಜಾಹೀದ್ (ಜಿಹಾದಿಗಳು) ಗಳಾರಿಗೂ ಅಪಾಯವಾಗಿಲ್ಲ ಎಂದು ಇಸಿಸ್ ಸಂದೇಶದಲ್ಲಿ ತಿಳಿಸಲಾಗಿದೆ.