ಪಣಜಿ: ಭಾರದ್ವಜ ಮುನಿಗಳು ರಚಿಸಿದ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ಅದೃಶ್ಯ ವಿಮಾನವನ್ನು ತಯಾರಿಸಲು ಭಾರತ ಮಿಲಿಟರಿ ಸಂಶೋಧನಾ ಸಂಸ್ಥೆ(ಡಿಆರ್‌ಡಿಓ) ಮುಂದಾಗಿದೆ.
ಮಹಾಭಾರತ ಯುದ್ಧದ ವೇಳೆ ಬಳಕೆಯಾಗಿತ್ತೆನ್ನಲಾಗಿದ್ದ ಅಗೋಚರ ಯುದ್ಧವಿಮಾನದ ತಂತ್ರಜ್ಞಾನದ ಆಧಾರದ ಮೇಲೆ ಭಾರತೀಯ ವಿಜ್ಞಾನಿ ಸಿಎಸ್‌ಆರ್ ಪ್ರಭು ಎಂಬುವರು ತಮಗೆ ಭಾರತದ ಪುರಾತನ ಶಾಸ್ತ್ರಗಳ ಮೂಲಕ ಅಗೋಚರ ವಿಮಾನವನ್ನು ತಯಾರಿಸುವ ಸೂತ್ರ ಗೊತ್ತಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು ಯೋಜನೆಗೆ ಬಳಸಿಕೊಳ್ಳಲು ಡಿಆರ್‌ಡಿಓ ತೀರ್ಮಾನಿಸಿದೆ ಎನ್ನಲಾಗಿದೆ.
ಭಾರದ್ವಜ ಮುನಿಗಳು ತಮ್ಮ ಬೃಹದ್ ವಿಮಾನ್ ಶಾಸ್ತ್ರ ಎಂಬ ಪುಸ್ತಕದಲ್ಲಿ ಕಣ್ಣಿಗೆ ಗೋಚರಿಸದಂತೆ ಸಹಾಯ ಮಾಡುವ ಕೆಲ ವಿಶೇಷ ವಸ್ತುಗಳಿಂದ ವಿಮಾನವನ್ನು ತಯಾರಿಸುವ ವಿದ್ಯೆ ಸೇರಿದಂತೆ ಅನೇಕ ವಿಷಯಗಳು ವಿವರಿಸಿದ್ದಾರೆ. ಈ ಸೂತ್ರ ನಿಜವೇ ಆದಲ್ಲಿ ತಮ್ಮ ಸಂಶೋಧನೆ ಕೆಲಸಗಳು ಸುಲಭವಾಗುತ್ತವೆ. ಇದನ್ನು ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಸಂಸ್ಥೆಯ ಮುಖ್ಯಸ್ಥ ಸತೀಶ್ ಕುಮಾರ್ ಹೇಳಿದ್ದಾರೆ.
ಈ ಯೋಜನೆ ಸಾಕಾರಗೊಂಡಲ್ಲಿ ರೇಡಾರ್ ಕಣ್ಣಿಗೆ ಬೀಳದಂಥ ಯುದ್ಧವಿಮಾನವನ್ನು ಪಡೆದ ಕೀರ್ತಿ ಭಾರತಕ್ಕೆ ಲಭಿಸುತ್ತದೆ.