

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಇಲ್ಲಿಯವರೆಗೆ ಅಫ್ಘಾನಿಸ್ತಾನಕ್ಕೆ ಒಳ್ಳೆಯ ಮುನ್ಸೂಚನೆಯನ್ನೇನು ನೀಡಿಲ್ಲ. ಅಫ್ಘಾನಿಸ್ತಾನದ ಟಿ20 ವಿಶ್ವಕಪ್ ಅಭಿಯಾನವು ಈಗಾಗಲೇ ಸಾಕಷ್ಟು ಪರೀಕ್ಷೆಗಳನ್ನು ಒಡ್ಡಿದೆ. ಇತ್ತ ಅಫ್ಘಾನಿಸ್ತಾನದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್ ನವದೆಹಲಿಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದಾರೆ.
ಮುಂಬೈ ಮಿರರ್ ಪ್ರಕಾರ, ಸುಬ್ರಮಣಿಯನ್ ಅವರಿಗೆ ಬುಧವಾರ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ರಾಜಧಾನಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ.
'ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕರಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡಿದೆ. ಅವರಿಗೆ ಸೌಮ್ಯ ಹೃದಯಾಘಾತವಾಗಿದ್ದು, ಅವರನ್ನು ಕೂಡಲೇ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಮತ್ತು ಈಗ ಉತ್ತಮವಾಗಿದ್ದಾರೆ' ಎಂದು ಮೂಲಗಳು ಪತ್ರಿಕೆಗೆ ತಿಳಿಸಿವೆ.
ಚೆನ್ನೈನಲ್ಲಿ ನೆಲೆಸಿರುವ ಸುಬ್ರಮಣಿಯನ್, ಅಫ್ಘಾನಿಸ್ತಾನ ಶಿಬಿರದಲ್ಲಿ ಹೆಸರುವಾಸಿಯಾದ ವ್ಯಕ್ತಿಯಾಗಿದ್ದು, ಸ್ಪೋರ್ಟಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಆಘಾತ
ಟಿ20 ಇತಿಹಾಸದಲ್ಲಿಯೇ ಅತ್ಯಂತ ಅದ್ಭುತ ಪಂದ್ಯಗಳಲ್ಲಿ ಒಂದನ್ನು ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗಷ್ಟೇ ಆಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಬಲಿಷ್ಟ ಹೋರಾಟ ನೀಡಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಎರಡು ಸೂಪರ್ ಓವರ್‌ಗಳಲ್ಲಿ ತಂಡವು ಕಾದಾಟ ನಡೆಸುವಂತಾಯಿತು. ತಂಡದ ರಹಮಾನುಲ್ಲಾ ಗುರ್ಬಾಜ್ ಉತ್ತಮ ಪ್ರದರ್ಶನ ನೀಡಿದರೂ, ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಈ ಪಂದ್ಯಕ್ಕೂ ಮುನ್ನ ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಐದು ವಿಕೆಟ್ ಸೋಲು ಕಂಡಿತ್ತು. ಪಂದ್ಯಾವಳಿಯನ್ನು ಪ್ರಾರಂಭಿಸಲು ಎರಡು ಸೋಲುಗಳು ಅವರನ್ನು ಗ್ರೂಪ್ ಡಿಯಲ್ಲಿ ಒತ್ತಡಕ್ಕೆ ಸಿಲುಕಿಸಿವೆ. ಅವರು ಫೆಬ್ರುವರಿ 16 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಯುಎಇ ವಿರುದ್ಧ ತಮ್ಮ ಕೊನೆಯ ಗುಂಪು ಪಂದ್ಯವನ್ನು ಆಡಲಿದೆ.
Advertisement