ದೇಶ

ಭೂಗತ ಪಾತಕಿ ಬನ್ನಂಜೆ ರಾಜಾ ಬಂಧನ

ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ...

ಈಜಿಪ್ಟ್: ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಭಾರತದ ಗುಪ್ತಚರ ಇಲಾಖೆಯ ವಿಶೇಷ ತನಿಖಾ ತಂಡ ಮೊರಾಕೋದಲ್ಲಿರುವ ಕಸಬ್ಲಂಕದಲ್ಲಿ ಬನ್ನಂಜೆ ರಾಜಾನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈತ ಕೊಲೆ, ಲೂಟಿ, ಅಪಹರಣ ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ವಾಂಟೆಡ್ ಪಟ್ಟಿಯಲ್ಲಿದ್ದನು. ಈತನ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸಲಾಗಿತ್ತು.

ಭಾರತದ ಹೋಟೆಲ್ ಉದ್ಯಮಿಯೊಬ್ಬರಿಂದ 5 ಕೋಟಿ ಹಣ ನೀಡುವಂತೆ ಬೆದರಿಕೆ ಹಾಕಿದ್ದನು. ಆಗ ಹೋಟೆಲ್ ಉದ್ಯಮಿ ಹಣ ನೀಡದೆ, ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಬನ್ನಂಜೆ ರಾಜಾ ಮರಾಕೋದಲ್ಲಿ ಹೆಗ್ಡೆ ಎಂಬ ಹೆಸರಿನಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಮಾರಕೋದಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಬನ್ನಂಜೆ ರಾಜಾ ಭಾಗಿಯಾಗಿಲ್ಲ. ಸ್ಥಳೀಯ ಪೊಲೀಸರು ಈತನ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ಮಾಹಿತಿ ನೀಡಲು 48 ಕಾಲ ಗಡುವು ನೀಡಿದ್ದಾರೆ. ಆದಷ್ಟೂ ಬೇಗ ಬೆಂಗಳೂರು ಪೊಲೀಸರು ಮಾರಾಕೋಗೆ ತೆರಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

BJP ತೊರೆಯಲು ಕಾರಣ ಬಹಿರಂಗಪಡಿಸಿದ Annamalai; ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನೆಂದರೆ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್‌, ಭಾರಿ ಟ್ರೋಲ್, ಸಂಗೀತಾ ಸಮರ್ಥನೆ, ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’!

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್