ಬಾಂಬ್ ಸ್ಫೋಟ 
ದೇಶ

ಪೇಶಾವರ ಮಸೀದಿ ಬಳಿ ಸರಣಿ ಸ್ಫೋಟ, ಗುಂಡಿನ ದಾಳಿ: 19 ಸಾವು

ಪೇಶಾವರದ ಮಸೀದಿಯೊಂದರ ಬಳಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಸ್ಫೋಟದಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದಾರೆ. ಪೇಶಾವರ ಹೈಯಾತಬಾದ್‌ನ ಇಮಾಮಿಯ ಮಸೀದಿ...

ಪೇಶಾವರ: ಇದೇ ಜನವರಿ 30 ರಂದು ಪಾಕಿಸ್ತಾನದ ಕರಾಚಿಯ ಮಸೀದಿಯೊಂದರ ಮೇಲೆ ನಡೆದ ಬಾಂಬ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಇದೀಗ ಪೇಶಾವರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ.

ಪೇಶಾವರ ಹೈಯಾತಬಾದ್‌ನ ಇಮಾಮಿಯ ಮಸೀದಿ ಇಮಾಮ್ಬರ್ಗಾ ಬಳಿ ಸರಣಿ ಸ್ಫೋಟ ಸಂಭಸಿದೆ. ಅಲ್ಲದೆ ಮಸೀದಿ ಬಳಿ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದು, ಘಟನೆಯಲ್ಲಿ ಸ್ಥಳದಲ್ಲೇ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಶುಕ್ರವಾರವಾದ ಇಂದು ಮುಸ್ಲಿಂ ಬಾಂಧವರು ಸಮೂಹ ಪ್ರಾರ್ಥನೆಗಾಗಿ ಮಸೀದಿ ಬಳಿ ಸೇರಿದ್ದರು. ಈ ವೇಳೆ ಮೂರು ಬಾಂಬ್ ಸ್ಫೋಟಗಳು ಸಂಭವಿಸಿದೆ ಎಂದು ಪಾಕ್ ಪತ್ರಿಕೆಯೊಂದು ಸುದ್ದಿ ಮಾಡಿದೆ.

ಕಳೆದ ಜನವರಿ 30 ರಂದು ಕರಾಚಿಯ ಶಿಕಾರಪುರದ ಶಿಯಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 49 ಅಮಾಯಕರು ಬಲಿಯಾಗಿದ್ದರು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!