ದೇಶ

ಎಚ್ಎಸ್ ಬಿಸಿ ಮೇಲೆ ಕೇಸ್

Vishwanath S

ನವದೆಹಲಿ: ಕಪ್ಪು ಹಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಜಿನೇವಾದಲ್ಲಿರುವ ಎಚ್ಎಸ್ ಬಿಸಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ.

ವಿದೇಶಿ ಖಾತೆಗಳಲ್ಲಿ ಅನಧಿಕೃತ ಮಾರ್ಗಗಳ ಮೂಲಕ ಗ್ರಾಹಕರಿಗೆ ತೆರಿಗೆ ತಪ್ಪಿಸಿ ಹಣ ಇಡಲು ಅನುಕೂಲ ಮಾಡಿಕೊಟ್ಟ ಆರೋಪದಡಿ ಈ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಲಾಗಿದೆ.

2006-07 ನಡುವೆ ತೆರೆಯಲಾಗಿರುವ ಕೆಲವು ಖಾತೆಗಳಿಗೆ ಸಂಬಂಧಿಸಿ ಈ ಪ್ರಕರಣ ದಾಖಲಿಸಲಾಗುತ್ತಿದೆ. ಈ ರೀತಿ ಪ್ರಕರಣ ದಾಖಲಿಸುವ ಕುರಿತು ಈಗಾಗಲೇ ಆದಾಯ ತೆರಿಗೆ ಇಲಾಖೆಯು ಕಪ್ಪುಹಣದ ಕುರಿತು ತನಿಖೆ ನಡೆಸುತ್ತಿರುವ ಎಸ್ಐಟಿಯ ಅಭಿಪ್ರಾಯ ಕೇಳಿದೆ. ಎಸ್ಐಟಿ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT