ದೇಶ

ಹೂಡಿಕೆದಾರರ ಹಣ ವಾಪಸ್ ನೀಡಿ: ಸುಪ್ರೀಂ

Vishwanath S

ನವದೆಹಲಿ: ಡೆವಲಪರ್‍ಗಳು ಹೂಡಿಕೆದಾರರನ್ನು ತಮಗಿಷ್ಟಬಂದಂತೆ ನಡೆಸಿಕೊಳ್ಳಬಾರದು. ಅವರು ಹಣ ವಾಪಸ್ ಕೇಳಿದರೆ ಕೊಡುವುದಿಲ್ಲ ಎಂದೂ ಹೇಳಬಾರದು. ಇದು ಸುಪ್ರೀಂ ಕೋರ್ಟ್ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಿದ ಸೂಚನೆ.

ಯಾವುದಾದರೂ ಯೋಜನೆ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಾಗ ಬೇರೆಡೆ ಜಾಗ ನೀಡುತ್ತೇನೆ ಎಂದು ಹೂಡಿಕೆದಾರರ ಹಣವನ್ನು ಇಟ್ಟುಕೊಳ್ಳುವುದು ತಪ್ಪು. ಅವರಿಗೆ ಅಂತಹ ಸ್ಥಳದಲ್ಲಿ ನಿವೇಶನ ಬೇಡ ಎಂದಾದರೆ ಹಣ ವಾಪಸ್ ನೀಡಬೇಕಾದ್ದು ಡೆವಲಪರ್‍ಗಳ ಕರ್ತವ್ಯ ಎಂದೂ ಸುಪ್ರೀಂ ಹೇಳಿದೆ.

ನೋಯ್ಡಾದಲ್ಲಿ ಸೂಪರ್‍ಟೆಕ್ ಕಂಪನಿಯ 40 ಮಹಡಿಯ 2 ವಸತಿ ಸಮುಚ್ಚಯಗಳ ನೆಲಸಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಸೂಚನೆ ನೀಡಿದೆ. 30 ದಿನಗಳ ಒಳಗಾಗಿ ಹೂಡಿಕೆದಾರರಿಗೆ ಅವರ ಹಣ ವಾಪಸ್ ನೀಡಬೇಕು. ನಂತರ 60 ದಿನಗಳೊಳಗೆ ಶೇ.14ರಷ್ಟು ಬಡ್ಡಿಯನ್ನೂ ನೀಡಬೇಕು ಎಂದು ಸೂಪರ್‍ಟೆಕ್‍ಗೆ ಸುಪ್ರೀಂ ಆದೇಶಿಸಿದೆ.

SCROLL FOR NEXT