ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 
ದೇಶ

ಇಸ್ಲಾಂ ವಿರುದ್ಧವಲ್ಲ, ಭಯೋತ್ಪಾದಕರ ವಿರುದ್ಧ ನಮ್ಮ ಹೋರಾಟ: ಒಬಾಮ

ನಮ್ಮ ಯುದ್ಧ ಇಸ್ಲಾಂ ಧರ್ಮದ ವಿರುದ್ಧವಲ್ಲ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಎಂದು ಅಮೆರಿಕದ ಅಧ್ಯಕ್ಷ ಬರಾಕ್...

ವಾಷಿಂಗ್ಟನ್: ನಮ್ಮ ಯುದ್ಧ ಇಸ್ಲಾಂ ಧರ್ಮದ ವಿರುದ್ಧವಲ್ಲ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟನೆ ನೀಡಿದ್ದಾರೆ.

ಇರಾಕ್ ಮತ್ತು ಸಿರಿಯಾದಲ್ಲಿರುವ ಇಸ್ಲಾಮಿಕ್ ಭಯೋತ್ಪಾದಕರನ್ನು ಹತ್ತಿಕ್ಕಲು ಅಮೆರಿಕ ಸಮರ ಸಾರಿದ್ದು, ಈ ಸಂಬಂಧ ಮಾತನಾಡಿದ ಬರಾಕ್ ಒಬಾಮ, ನಮ್ಮ ಯುದ್ಧ ಇಸ್ಲಾಂ ಧರ್ಮದ ವಿರುದ್ದವಲ್ಲ. ಆದರೆ, ಅದರ ಹೆಸರಲ್ಲಿ ಅನೇಕ ನಾಗರಿಕರನ್ನು ಹತ್ಯೆಗೈಯುತ್ತಿರುವ ಭಯೋತ್ಪಾದಕರ ವಿರುದ್ಧ. ಈ ಭಯೋತ್ಪಾದಕರನ್ನು ಹತ್ತಿಕ್ಕದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇಸ್ಲಾಂ ಸಿದ್ಧಾಂತವನ್ನು ಬಿಟ್ಟು ಬಂದಂತಹ ಅನೇಕ ಮುಸ್ಲಿಮರು ಇದ್ದಾರೆ. ಆದರೆ, ಅವರ ಬಗ್ಗೆ ಉಗ್ರರು ಈವರೆಗೆ ಧನಿಯೆತ್ತಿಲ್ಲ. ದೇವರ ಹೆಸರಲ್ಲಿ ಕ್ರೈಸ್ತ, ಜುಡೈಸಿಂ, ಬೌದ್ಧ, ಅಥವಾ ಹಿಂದೂ ಧರ್ಮದ ಅಮಾಯಕರನ್ನು ಕೊಲ್ಲುವವರು ಇಸ್ಲಾಮ್ ಧರ್ಮವನ್ನು ಪ್ರತಿನಿಧಿಸಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಭಯೋತ್ಪಾದನೆ ಮತ್ತು ಗಲಭೆಗೆ ಯಾವುದೇ ಧರ್ಮ ಹೊಣೆಯಲ್ಲ, ಅದಕ್ಕೆ ಜನರೇ ಹೊಣೆ, ತಮ್ಮ ಕೆಲಸದ ಸಾಧನೆಗೆ ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದ ಅವರು, ಭಯೋತ್ಪಾದಕರನ್ನು ಹತ್ತಿಕ್ಕಲು ನೆರೆ ದೇಶಗಳ ಸಹಕಾರ ಅಗತ್ಯ. ಎಲ್ಲರೂ ಒಗ್ಗೂಡಿ ಉಗ್ರರನ್ನು ಸದೆಬಡಿಯೋಣ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT