ದೇಶ

ರಹಸ್ಯ ದಾಖಲೆಗಳ ಸೋರಿಕೆ: ಸದನದಲ್ಲಿ ಉತ್ತರಿಸುತ್ತೇನೆ ಎಂದ ಮೊಯ್ಲಿ

Mainashree

ನವದೆಹಲಿ: ಮಾಜಿ ಸಚಿವ ವೀರಪ್ಪ ಮೊಯ್ಲಿ ಅವಧಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಲಾಗಿದೆ ಎಂಬ ಅನುಮಾನ ಮೂಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮೊಯ್ಲಿ, ಮಾಧ್ಯಮಗಳೆದುರು ನಾನೇನೂ ಉತ್ತರಿಸುವುದಿಲ್ಲ. ಸದನದಲ್ಲಿ ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.

ದೊಡ್ಡ ದೊಡ್ಡ ತೈಲ ಕಂಪನಿಗಳ ಆದೇಶದನ್ವಯ ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಗುರುವಾರ ಬಹಿರಂಗವಾಗಿದೆ. ಮಾಜಿ ಸಚಿವ ವೀರಪ್ಪ ಮೊಯ್ಲಿ ಅವಧಿಯಲ್ಲಿ ಈ ಸೋರಿಕೆ ನಡೆದಿದೆಯೇ ಎಂಬ ಅನುಮಾನವೂ ಮೂಡಿದೆ.

ಪ್ರಕರಣ ಸಂಬಂಧ ಗುರುವಾರ ದೆಹಲಿ ಪೊಲೀಸರು ಶಾಸ್ತ್ರಿ ಭವನದಲ್ಲಿ ಐವರನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಮಾಜಿ ಪತ್ರಕರ್ತ. ಇದೇ ವೇಳೆ ಈ ಸೋರಿಕೆಯ ಫಲಾನುಭವಿಗಳು ಯಾರು ಎಂಬ ಬಗ್ಗೆಯೂ ಮಾಹಿತಿಯಿದ್ದು, ಅವರನ್ನೂ ವಚಾರಣೆಗೊಳಪಡಿಸಲಾಗುತ್ತಿದೆ. ತೈಲಾನ್ವೇಷಣೆ, ದರ ನಿಗದಿ, ಆಮದು ಸೇರಿದಂತೆ ಅನೇಕ ಮಾಹಿತಿಗಳು ಇದರಲ್ಲಿದ್ದವು ಎನ್ನಲಾಗಿದೆ.

ಇದೇ ವೇಳೆ, ಸೋರಿಕೆ ಸಂಬಂಧ ದೆಹಲಿ ಪೊಲೀಸರು ರಿಲಯನ್ಸ್ ಇಂಡಸ್ಟ್ರೀಸ್‌ನ ನೌಕರನೊಬ್ಬನನ್ನು ವಶಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ರಿಲಯನ್ಸ್ ಹೇಳಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಯುಪಿಎ ಅವಧಿಯಲ್ಲಿ ಕಡತಗಳ ಮಾಹಿತಿ ಸೋರಿಕೆ ಸಾಮಾನ್ಯವಾಗಿತ್ತು. ಆದರೆ ಈಗ ಹಾಗೆ ಆಗಲು ನಾವು ಅವಕಾಶ ಕಲ್ಪಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪರಿಧಿಯಲ್ಲಿ ಕ್ರಮ ಕೈಗೊಳುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT