ದೇಶ

ಎಚ್‌1ಎನ್‌1 ಮಹಾಮಾರಿಗೆ 703 ಬಲಿ

Vishwanath S

ನವದೆಹಲಿ: ಎಚ್1ಎನ್1 ಮಹಾಮಾರಿಗೆ ದೇಶವೇ ಸತ್ತರಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಇದುವರೆಗೆ 703 ಮಂದಿ ಎಚ್‌1ಎನ್‌1ಗೆ ಬಲಿ­ಯಾಗಿದ್ದಾರೆ.

ಎಚ್‌1ಎನ್‌1ಗೆ 703 ಮಂದಿ ಬಲಿಯಾಗಿದ್ದು, 10 ಸಾವಿರ ಮಂದಿಗೆ ಜ್ವರದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ದೃಢಪಡಿಸಿವೆ.

ಎಚ್‌1ಎನ್‌1 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೆ ತುರ್ತಾಗಿ ಆಯುರ್ವೇದ ಔಷಧ ಕಳುಹಿಸಿಕೊಡಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ  ಶ್ರೀಪಾದ್‌ ನಾಯಕ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಆಯುಷ್‌ ಸಚಿವಾಲಯದ ಹೊಣೆಯನ್ನೂ ನಾಯಕ್‌ ನೋಡಿಕೊಳ್ಳುತ್ತಿದ್ದಾರೆ. ‘ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ’ ಎಂದ ಅವರು, ಈ ವಿಶೇಷ ಲಸಿಕೆಯನ್ನು ಶೀಘ್ರದಲ್ಲೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯಗೊಳಿಸಲಾಗುವುದು. ಈಗಾಗಲೇ ರಾಜಸ್ತಾನದಲ್ಲಿ 5 ರಿಂದ 6 ಸಾವಿರ ಮಂದಿಗೆ ಈ ಔಷಧ ನೀಡಲಾಗಿದೆ ಎಂದರು.

SCROLL FOR NEXT