ಅತ್ಯಾಧುನಿಕ ಡ್ರೋನ್ ವಿಮಾನ (ಸಂಗ್ರಹ ಚಿತ್ರ) 
ದೇಶ

ಪೊಲೀಸರ ನೆರವಿಗೆ ಅತ್ಯಾಧುನಿಕ ಡ್ರೋನ್

ಕಾರ್ಯಾಚರಣೆ ಸಂದರ್ಭದಲ್ಲಿ ಅಡಗಿ ಕುಳಿತ ಉಗ್ರರು, ಅಪರಾಧಿಗಳು ಹೀಗೆ ಯಾರು ಬೇಕಾದರೂ ಪೊಲೀಸರ ಮೇಲೆ ದಾಳಿ ಮಾಡಬಹುದು...

ಬೆಂಗಳೂರು: ಕಾರ್ಯಾಚರಣೆ ಸಂದರ್ಭದಲ್ಲಿ ಅಡಗಿ ಕುಳಿತ ಉಗ್ರರು, ಅಪರಾಧಿಗಳು ಹೀಗೆ ಯಾರು ಬೇಕಾದರೂ ಪೊಲೀಸರ ಮೇಲೆ ದಾಳಿ ಮಾಡಬಹುದು. ಅವರ ಇರುವಿಕೆ ಬಗ್ಗೆ ಖಚಿತ ಮಾಹಿತಿಯನ್ನು ನೀಡುವ ಅತ್ಯಾಧುನಿಕ ಮಾನವರಹಿತ ಪುಟ್ಟ ವಿಮಾನ ಡ್ರೋನ್ ಗಳನ್ನು ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಉಗ್ರರ ದಾಳಿ, ಗಲಭೆ, ಹಿಂಸಾತ್ಮಕ ಪ್ರತಿಭಟನೆ ಸಂದರ್ಭಗಳಲ್ಲಿ ಪೊಲೀಸರು ಪ್ರಮುಖ ಟಾರ್ಗೆಟ್ ಆಗುತ್ತಾರೆ. ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು, ಪೊಲೀಸ್ ಜೀವಕ್ಕೆ ಪ್ರಾಣ ಹಾನಿಯಾನಿಗದಂತೆ ನೋಡಿಕೊಳ್ಳಲು ಭವಿಷ್ಯದಲ್ಲಿ ಡ್ರೋನ್‍ಗಳು ಬೇಕೇ ಬೇಕು. ಇವು ಈಗಾಗಲೇ ಭಾರತದಲ್ಲಿವೆ. ಆದರೆ, ಸೇನೆಯಲ್ಲಿ ಮಾತ್ರ ಆಧುನಿಕ ಡ್ರೋನ್‍ಗಳಿದ್ದು ಪೊಲೀಸ್ ಇಲಾಖೆಗೆ ಅಗತ್ಯವಾದ ಆಧುನಿಕ ಡ್ರೋನ್‍ಗಳು ಲಭ್ಯವಾಗುತ್ತಿಲ್ಲ.

ಏರೋ ಇಂಡಿಯಾದಲ್ಲಿ `ಓಐಎಸ್ ಅಡ್ವಾನ್ಸ್‍ಡ್ ಟೆಕ್ನಾಲಜಿ' ಸಂಸ್ಥೆಯ ಡ್ರೋನ್‍ಗಳು ಪೊಲೀಸ್ ಇಲಾಖೆಗೆ ಹೇಳಿ ಮಾಡಿಸಿದಂತಿವೆ. ಈಗಾಗಲೇ ಯುರೋಪ್ ರಾಷ್ಟ್ರಗಳು ಹಾಗೂ ಥಾಯ್ಲೆಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಗಲಭೆ ಸಂದರ್ಭಗಳಲ್ಲಿ ಬಳಕೆಯಾಗಿದ್ದು, ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ. ಈ ಸಂಸ್ಥೆ ನವದೆಹಲಿಯಲ್ಲಿ ತನ್ನ ನೂತನ ಕಚೇರಿ ಆರಂಭಿಸಿದ್ದು, ಭವಿಷ್ಯದಲ್ಲಿ ಭಾರತದಲ್ಲೇ ಡ್ರೋನ್‍ಗಳನ್ನು ತಯಾರಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಪ್ರತಿನಿಧಿ ಜಾನ್ ಹೇಳಿದರು. ಅಂಗೈ ಅಗಲದಿಂದ ಹಿಡಿದು ಬೃಹತ್ ಗಾತ್ರದ ಡ್ರೋನ್ ಗಳು ಪ್ರದರ್ಶನದಲ್ಲಿವೆ. ಜಿಪಿಎಸ್ ಆಧಾರಿತ ಡ್ರೋನ್ ಆಟೋಮ್ಯಾಟಿಕ್ ಲ್ಯಾಂಡಿಂಗ್ ವ್ಯವಸ್ಥೆ ಹೊಂದಿದೆ. ಇದಕ್ಕೆ ವಿಶೇಷ ತರಬೇತಿಯೇನೂ ಬೇಕಾಗುವುದಿಲ್ಲ.

ವಿಶೇಷ ಏನು?: ಥರ್ಮಲ್ ಇಮೇಜಿಂಗ್, ಹಗಲು ಹಾಗೂ ರಾತ್ರಿ ವೇಳೆ ಫೋಟೋ ಹಾಗೂ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಇರುತ್ತದೆ. ಗರಿಷ್ಠ 1 ಸಾವಿರ ಮೀಟರ್ ಎತ್ತರದವರೆಗೆ ಹಾರಾಡುತ್ತಾ ಥರ್ಮಲ್ ಇಮೇಜಿಂಗ್ (ಫೋಟೋ) ಸೆರೆ ಹಿಡಿಯಬಹುದಾಗಿದ್ದು, ನೆಲದ ಮೇಲೆ ಇರುವವರ ಗಮನಕ್ಕೆ ಇವು ಬರುವುದಿಲ್ಲ. 1200 ಮೀಟರ್ ದೂರದವರೆಗೆ ಹಾರಾಡುವ ಈ ಡ್ರೋನ್‍ಗಳು ಅರ್ಧ ಗಂಟೆ ಕಾಲ ಆಕಾಶದಲ್ಲಿರಬಲ್ಲವು.

ಕಟ್ಟಡದೊಳಗೆ ಹಾರಾಟ
ಉಗ್ರರು ಅಡಗಿ ಕುಳಿತ, ಕಟ್ಟಡ, ಮಳಿಗೆ ಅಥವಾ ಮನೆಯೋಳಗೆ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಪತ್ತೆ ಮಾಡುವುದು ಸುಲಭವಲ್ಲ. ಆದರೆ, ಈ ಡ್ರೋನ್‍ಗಳು ರಿಮೋಟ್ ನಿಯಂತ್ರಣದಲ್ಲಿ ಕಟ್ಟಡದ ಒಳಗೆ ಹಾರಾಡಿ ಮಾಹಿತಿ ನೀಡುವ ಮೂಲಕ ಪೊಲೀಸ್ ಹಾಗೂ ಮಿಲಿಟರಿಗೆ ಅತ್ಯಂತ ಸಹಕಾರಿಯಾಗಲಿವೆ ಎನ್ನುತ್ತಾರೆ ಓಐಎಸ್-ಎಟಿ ಕಂಪನಿಯ ಪ್ರತಿನಿಧಿ ಜಾನ್.

ಭಾರತದ ಮಹಾ ನಗರಗಳಿಗೆ ಭದ್ರತೆ ದೃಷ್ಟಿಯಿಂದ ಇಂತಹ ಡ್ರೋನ್‍ಗಳು ಅಗತ್ಯವಾಗಿದ್ದು ಅವುಗಳ ಬಳಕೆಯಿಂದ ಪ್ರಾಣ ಹಾನಿ ಹಾಗೂ ವಿಧ್ವಂಸಕ ಕೃತ್ಯಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT