ದೇಶ

ಜಮ್ಮು, ಕಾಶ್ಮೀರ ಸಿಎಂ ಆಗಿ ಮಾ.1ಕ್ಕೆ ಮುಫ್ತಿ ಪ್ರಮಾಣ

Vishwanath S

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಮಾ.1ರಂದು ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.

ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಬಜೆಟ್ ಅಧಿವೇಶನಕ್ಕೂ ಮೊದಲೇ ಪಿಡಿಪಿ ನಾಯಕ ಮುಫ್ತಿ ನೇತೃತ್ವದಲ್ಲಿ
ಸರ್ಕಾರ ರಚನೆಯಾಗಲಿದೆ ಎಂದು ಹೇಳಲಾಗಿತ್ತು.

ಆದರೆ, ಕಲಂ 370 ಮತ್ತು ಶಸಸ್ತ್ರಪಡೆಗಳ ವಿಶೇಷಾಧಿಕಾರಗಳ ಕಾಯ್ದೆಗೆ ಸಂಬಂಧಿಸಿದ ಭಿನ್ನಮತ ಪರಿಹಾರಕ್ಕೆ ಉಭಯ ಪಕ್ಷಗಳು ಹೆಚ್ಚಿನ ಕಾಲಾವಕಾಶ ತೆಗೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ರಚನೆ ವಿಳಂಬವಾಯಿತು ಎಂದು ಹೇಳಲಾಗಿದೆ.

ಪ್ರಮಾಣ ವಚನಕ್ಕೆ ಸಂಬಂಧಿಸಿ ಮೆಹಬೂಬಾ ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ. ಇದೇ ವಾರ ಅವರು ಪ್ರಧಾನಿ ಭೇಟಿಗೂ ನಿರ್ಧರಿಸಿದ್ದಾರೆ.

SCROLL FOR NEXT