ದೇಶ

ಜಯಾ ಪ್ರಕರಣ: ಅರ್ಜಿದಾರರ ಪರವಾದ ಪೂರ್ಣ

Vishwanath S

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೇರಿ ನಾಲ್ವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಾದ ಪೂರ್ಣಗೊಂಡಿದೆ. ಮಂಗಳವಾರ ಪ್ರಾಸಿಕ್ಯೂಷನ್ ಪರ ಎಸ್‍ಪಿಪಿ ಭವಾನಿ ಸಿಂಗ್ ತಮ್ಮ ವಾದ ಆರಂಭಿಸಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಅಸ್ಪಷ್ಟವಾಗಿದ್ದು, ಆಪಾದಿತರ ಪರ ವಕೀಲರ ವಾದವನ್ನು ಅಲ್ಲಗಳೆಯಲು ಸೂಕ್ತವಾದ ದಾಖಲೆಗಳನ್ನು ಪ್ರಾಸಿಕ್ಯೂಷನ್ ಮಂಡಿಸುತ್ತಿಲ್ಲ ಎಂದು ವಿಶೇಷ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ತಮಗೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕೆಂದು ಎಸ್‍ಪಿಪಿ ಭವಾನಿ ಸಿಂಗ್ ಕೋರಿದರು. ಇದನ್ನು ನಿರಾಕರಿಸಿದ ವಿಶೇಷ ನ್ಯಾಯಪೀಠದ ನ್ಯಾ.ಸಿ.ಆರ್.ಕುಮಾರಸ್ವಾಮಿ, ಅರ್ಜಿ ವಿಚಾರಣೆ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ಸುಪ್ರೀಂನ ಆದೇಶವಿದೆ ಎಂದು ಎಚ್ಚರಿಸಿದ ಹಿನ್ನೆಲೆಯಲ್ಲಿ ಎಸ್‍ಪಿಪಿ ವಾದ ಮಂಡನೆಗೆ ಮುಂದಾದರು. ಎಸ್‍ಪಿಪಿ ವಾದ ಆಲಿಸಿದ ಪೀಠ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿದೆ.

SCROLL FOR NEXT