ಶಿಮ್ಲಾ: ರಾಜ್ಯದಲ್ಲಿರುವ ನನ್ನ ಆಸ್ತಿಪಾಸ್ತಿಗಳ ವಿವರ ಬಹಿರಂಗಪಡಿಸಬೇಡಿ. ಬಹಿರಂಗಪಡಿಸಿದರೆ ನನ್ನ ಜೀವಕ್ಕೆ ಅಪಾಯ ಉಂಟಾಗಬಹುದು. ಹೀಗೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಹಿಮಾಚಲಪ್ರದೇಶ ಸರ್ಕಾರವನ್ನು ಕೋರಿಕೊಂಡಿದ್ದಾರೆ.
ಅವರ ಆಸ್ತಿಗೆ ಸಂಬಂಧಿಸಿ ಸಲ್ಲಿಸಲಾದ ಆರ್‍ಟಿಐ ಅರ್ಜಿಯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿರುವ ಪ್ರಿಯಾಂಕಾ ಎಸ್ ಪಿಜಿಯಿಂದ ಭದ್ರತೆ ಪಡೆಯುತ್ತಿರುವ ಕಾರಣ ಅವರ ಆಸ್ತಿ ವಿವರ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಶಿಮ್ಲಾ ಉಪ ಆಯುಕ್ತರು ತಿಳಿಸಿದ್ದಾರೆ.