ದೇಶ

ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ ಎಂದ ಸಮೀಕ್ಷೆ ದೋಷಪೂರಿತ

Mainashree

ಲಂಡನ್: ಇಡೀ ವಿಶ್ವದಲ್ಲಿಯೇ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳುವ ವರದಿ ದೋಷಪೂರಿತದಿಂದ ಕೂಡಿದೆ ಎಂದು ಭಾರತ ಮತ್ತು ಬ್ರಿಟನ್‌ನ ವಿಜ್ಞಾನಿಗಳ ತಂಡ ಹೇಳಿದೆ.

ಹುಲಿಗಳ ಸಂಖ್ಯೆಯನ್ನು ಗುರುತಿಸುವುದಕ್ಕೆ ಆಯ್ದುಕೊಂಡ ವಿಧಾನ ಸರಿಯಾಗಿಲ್ಲ. ಎರಡು ವಿಧಾನಗಳಲ್ಲಿ ಹುಲಿಗಳ ಸಂಖ್ಯೆಯನ್ನು ಗುರುತಿಸಲಾಗಿದ್ದು, ಇದು ದೋಷಪೂರಿತವಾಗಿ ಎಂದು ಹೇಳಿದ್ದಾರೆ.

ಆಕ್ಸ್‌ಫರ್ಡ್ ವಿವಿ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ವೈಲ್ಡ್‌ಲೈಫ್ ಕನ್ಸ್‌ರ್ವೇಷನ್ ಸೊಸೈಟಿಯ ವಿಜ್ಞಾನಿಗಳ ತಂಡ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ವರದಿ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಾಲ್ಕು ವರ್ಷದಲ್ಲಿ ಭಾರತದಲ್ಲಿ ವ್ಯಾಘ್ರಗಳ ಸಂಖ್ಯೆ ಶೇ.30ರಷ್ಟು ಹೆಚ್ಚಿದೆ. 2011ರಲ್ಲಿ 1,706 ಹುಲಿಗಳಿದ್ದವು. 2015ರ ಜನವರಿಗೆ ಈ ಸಂಖ್ಯೆ 2,226ಕ್ಕೆ ಹೆಚ್ಚಿದೆ ಎಂದು ಭಾರತ ಹೇಳಿತ್ತು.

ಭಾರತದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಎಂದು ಪತ್ತೆ ಹಚ್ಚುಲು ಟ್ರ್ಯಾಪ್ ಮತ್ತು ರೇಡಿಯೊ ಕಾಲರ್ ವಿಧಾನವನ್ನು ಅನುಸರಿಸಲಾಗಿತ್ತು. ಆದರೆ, ಈ ವಿಧಾನದೊಳಗೆ ಲೋಪಗಳು ಒಳಗೊಂಡಿವೆ. ಇದರಿಂದ ಬರುವ ಫಲಿತಾಂಶ ನಿಖರವಾಗಿರುವುದಿಲ್ಲ ಎಂದು ವಿಜ್ಞಾನಿಗಳ ತಂಡ ವಾದ ಮಂಡಿಸಿದೆ.

ತೀರಾ ಸಣ್ಣ ಪ್ರದೇಶಗಳಲ್ಲಿ ಕಾಲರ್ ಮತ್ತು ಕ್ಯಾಮೆರಾದಿಂದ ಹುಲಿಗಳನ್ನು ಗುರುತಿಸುವ ವಿಧಾನ ಯಶಸ್ವಿಯಾಗುತ್ತದೆ. ಆದರೆ ವಿಶಾಲ ಪ್ರದೇಶದಲ್ಲಿ ಈ ವಿಧಾನ ಬಳಕೆಯಾಗುವುದಿಲ್ಲ. ಇದು ನಂಬಲಾರ್ಹ ವಿಧಾನವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹುಲಿ ಸೇರಿದಂತೆ ಇತರೆ ವನ್ಯಜೀವಿಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸುವ ವಿಧಾನದಲ್ಲಿ ಟ್ರ್ಯಾಪ್ ಮತ್ತು ರೇಡಿಯೊ ಕಾಲರ್ ವಿಧಾನವು ಒಂದು. ಹುಲಿಗಳನ್ನು ಪ್ರತ್ಯಕ್ಷವಾಗಿ ಕಂಡು ಲೆಕ್ಕ ಹಾಕುವುದಕ್ಕಿಂತ ಅವು ಸಂಚರಿಸುವ ಎಡೆಗಳಲ್ಲಿ ಕ್ಯಾಮೆರಾ ಅಳವಡಿಸಿ ಗುರುತು ಮಾಡಿಕೊಳ್ಳುವುದು ಹಾಗೂ ಹುಲಿಗಳ ಕೊರಳಿಗೆ ರೇಡಿಯೊ ಕಾಲರ್ ಹಾಕಿ ಸಂಖ್ಯೆಯನ್ನು ಪತ್ತೆ ಹಚ್ಚುವುದು, ಈ ಎರಡು ವಿಧಾನಗಳ ದತ್ತಾಂಶಗಳನ್ನು ಕೂಡಿಸಿ ತಾಳೆ ಹಾಕುವುದಕ್ಕೆ ಮಾಪನಾಂಕ ಸೂಚಿ ವಿಧಾನ (ಇಂಡೆಕ್ಸ್ ಕ್ಯಾಲಿಬ್ರೇಷನ್ ಮಾಡೆಲ್) ಎನ್ನಲಾಗುತ್ತದೆ.

ಆಕ್ಸ್‌ಫರ್ಡ್ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ವೈಲ್ಡ್ ಲೈಫ್ ಕನ್ಸರ್‌ವೇಶನ್ ರೀಸರ್ಚ್ ಯುನಿಟ್‌ನ ಮುಖ್ಯಸ್ಥ ಅರ್ಜುನ್ ಗೋಪಾಲ್ ಸ್ವಾಮಿ ಅವರು ಭಾರತ ಅನುಸರಿಸಿರುವ ವೈಧಾನಿಕ ಲೋಪಗಳನ್ನು ಪಟ್ಟಿ ಮಾಡಿದ್ದಾರೆ.

SCROLL FOR NEXT