ದೇಶ

ಸಾಗರೋತ್ತರದಲ್ಲಿ ಎಲ್‌ಟಿಟಿಇ ಇನ್ನು ಸಕ್ರೀಯವಾಗಿದೆ: ರಾಜಪಕ್ಸ

Mainashree

ಕೊಲಂಬೊ: ಸಾಗರೋತ್ತರದಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್(ಎಲ್‌ಟಿಟಿಇ) ಉಗ್ರಗಾಮಿ ಸಂಘಟನೆ ಇನ್ನು ಸಕ್ರೀಯವಾಗಿದೆ ಎಂದು ಶ್ರೀಲಂಕಾ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಲಂಕಾದ ತಮಿಳರ ಪ್ರಾಂತ್ಯದಲ್ಲಿ ನಿಯೋಜಿಸಲಾಗಿರುವ ಸೇನಾ ಪಡೆಯನ್ನು ಕಡಿಮೆಗೊಳಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇದಕ್ಕೆ ಪ್ರತಿಕ್ರಯಿಸಿರುವ ಲಂಕಾ ಸೇನಾ ಪಡೆ, ಎಲ್‌ಟಿಟಿಇ ಸಾಗರೋತ್ತರದಲ್ಲಿ ಇನ್ನು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಸೇನಾ ನಿಯೋಜನೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಭಾಕರನ್ ಹತ್ಯೆಯಾದ ಮಾತ್ರಕ್ಕೆ, ಎಲ್‌ಟಿಟಿಇ ನಾಶವಾಗಿದೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ಏಕೆಂದರೇ, ಎಲ್‌ಟಿಟಿಇಯವರು ಈಗಲೂ ಸಕ್ರೀಯವಾಗಿದ್ದು, ಯಾವುದೇ ಕ್ಷಣದಲ್ಲೂ ದಾಳಿ ನಡೆಸಬಹುದು. ಹಾಗಾಗಿ, ಸೇನಾ ನಿಯೋಜನೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಗೊಟಭಯ ರಾಜಪಕ್ಸ ತಿಳಿಸಿದ್ದಾರೆ.

SCROLL FOR NEXT