ದೇಶ

ಭಟ್ಕಳ ಉಗ್ರ ಅನ್ವರ್ ಪರ ಪ್ರಚಾರ ನಡೆಸುತ್ತಿದ್ದ ವೆಬ್‌ಸೈಟ್ ಬ್ಲಾಕ್

Lakshmi R

ನವದೆಹಲಿ: ಭಟ್ಕಳ ಮೂಲದ ಮೃತ ಉಗ್ರ ಅನ್ವರ್ ಹುಸೇನ್ ಪರ ಪ್ರಚಾರ ನಡೆಸುವ, ಈ ಮೂಲಕ ಇಸಿಸ್ ಸಂಘಟನೆಗೆ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ವೆಬ್‌ಸೈಟ್‌ಗಳೂ ಸರ್ಕಾರ ಇತ್ತೀಚೆಗೆ ಬ್ಲಾಕ್ ಮಾಡಿದ ದೇಶವಿರೋಧಿ ವೆಬ್‌ಸೈಟ್‌ಗಳ ಪಟ್ಟಿಯಲ್ಲಿವೆ.

ಮುಂಬೈ ನ್ಯಾಯಾಲಯದ ಸೂಚನೆಯಂತೆ ಸರ್ಕಾರ ಇತ್ತೀಚೆಗೆ ದೇಶವಿರೋಧಿ ಹಾಗೂ ಉಗ್ರ ಸಂಘಟನೆಗಳ ಪರವಾಗಿ ಲೇಖನ, ವಿಚಾರ ಹಾಗೂ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಒಟ್ಟು 32 ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿತ್ತು.

ಆದರೆ, ಇವುಗಳಲ್ಲಿ ಬಹುತೇಕ ವೆಬ್‌ಸೈಟ್‌ಗಳಿಗೆ ಸಂಪರ್ಕ ವಿವರವೇ ಇಲ್ಲ. ಜತೆಗೆ, ಬಹುತೇಕ ವೆಬ್‌ಸೈಟ್‌ಗಳ ಸರ್ವರ್‌ಗಳಿರುವುದು ಅಮೆರಿಕ, ಯುರೋಪ್ ಮತ್ತಿತರ ದೇಶಗಳಲ್ಲಿ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ಈ ವೆಬ್‌ಸೈಟ್‌ಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ತೊಂದರೆಯಾಗುತ್ತಿದೆ. 32ರಲ್ಲಿ ಒಟ್ಟು ಏಳು ವೆಬ್‌ಸೈಟ್‌ಗಳಷ್ಟೇ ಸರ್ಕಾರ ನೀಡಿದ ನೋಟಿಸ್‌ಗೆ ಉತ್ತರ ನೀಡಿತ್ತು.

ಜತೆಗೆ, ಇನ್ನು ಮುಂದೆ ತಮ್ಮ ವೆಬ್‌ಸೈಟ್‌ನಲ್ಲಿ ದೇಶವಿರೋಧಿ ವಿಚಾರಗಳನ್ನು ಪ್ರಕಟಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿತ್ತು.

ಉಗ್ರರು ಅದರಲ್ಲೂ ಮುಖ್ಯವಾಗಿ ಇಸಿಸಿ ಸಂಘಟನೆ ಭಾರತೀಯ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೈಬರ್ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ಇಟ್ಟಿದೆ.

SCROLL FOR NEXT