ದೇಶ

ಕಲಿಯುಗದ ಭೀಮ: ಗಮನಸೆಳೆದ ಹರಿಯಾಣ ಟ್ರಾಫಿಕ್ ಪೊಲೀಸ್

Lakshmi R

ಅಬಾಂಲ: ಈತ ಟ್ರಾಫಿಕ್ ಪೊಲೀಸ್ ಕಾನ್ಸ್‌ಸ್ಟೆಬಲ್ ರಾಜೇಶ್ ಕುಮಾರ್ ಅಲಿಯಾಸ್ ಭೀಮಾ. ಈತನ ಎತ್ತರ ಬರೋಬ್ಬರಿ 7 ಅಡಿ 4 ಇಂಚು. ಭೀಮ ಎಂತಲೇ ಹರಿಯಾಣದ ಅಬಾಂಲದಲ್ಲಿ ಚಿರಪರಿಚಿತ.

ರಾಜೇಶ್ ತನ್ನ ಎತ್ತರದ ದೈಹಿಕ ಆಕಾರದ ಮೂಲಕ ಸ್ಥಳೀಯರ ಗಮನಸೆಳೆಯುತ್ತಿದ್ದಾನೆ. ತನ್ನ ಕೆಲಸದ ಸಮಯವನ್ನು ಹೊರತುಪಡಿಸಿ, ಪ್ರತಿ ದಿನ 6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾನೆ ಕಲಿಯುಗದ ಈ ಭೀಮಾ.

ರಾಜೇಶ್ ಭಾರತದಲ್ಲೇ 3ನೇ ಅತಿ ಎತ್ತರ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ಪ್ರಸ್ತುತ ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಮೊದಲ ಎತ್ತರದ ವ್ಯಕ್ತಿ ಎಂಬ ಹೆಸರನ್ನು ಉಳಿಸಿಕೊಂಡಿದ್ದಾನೆ.

ಇನ್ನೂ ರಾಜೇಶ್‌ನ ಊಟದ ವಿಚಾರ ಕೇಳಿದರೆ ಎಂತವರು ಸಹಾ ನಿಬ್ಬೆರಗಾಗುತ್ತಾರೆ. 155 ಕೆಜಿ ತೂಕವಿರುವ ರಾಜೇಶ್‌ಗೆ, ಪ್ರತಿ ಎರಡು ಗಂಟೆಗಳಿಗೊಮ್ಮೆ ಊಟ ಬೇಕೆ ಬೇಕು. ಈತನ ಊಟದಲ್ಲಿನ ಪದಾರ್ಥಗಳು ಏನೇನು ಗೊತ್ತಾ? 40 ಮೊಟ್ಟೆಗಳು, 40 ರೊಟ್ಟಿ, 3 ಕೆಜಿ ಚಿಕ್ಕನ್, 5 ಲೀ. ಹಾಲು, 4 ಕೆಜಿ ತಾಜಾ ಹಣ್ಣುಗಳು. ಅಬ್ಬಾ ಇದನ್ನು ಕೇಳಿದರನೇ ಸುಸ್ತಾಗಿ ಹೋಗುತ್ತೇವೆ. ಆದರೆ ರಾಜೇಶ್‌ಗೆ ಇದು ದಿನನಿತ್ಯದ ಸಾಮಾನ್ಯ ಊಟದ ಪದಾರ್ಥಗಳು!

ಈತ ದುಡಿಯುವ ಸಂಬಳವೆಲ್ಲ, ಈತನ ಊಟಕ್ಕೆ ಸಾಲದಂತೆ. ಮನೆಯವರಿಂದಲೇ ಊಟಕ್ಕಾಗಿ ಮತ್ತಷ್ಟು ಹಣ ಪಡೆಯುತ್ತಾನಂತೆ ಈ ಕಲಿಯುಗದ ಭೀಮಾ.

8 ಮಂದಿ ಒಡಹುಟ್ಟಿದವರಲ್ಲಿ ರಾಜೇಶ್ ಅತಿ ಎತ್ತರದ ವ್ಯಕ್ತಿ. ಈತನ ಎತ್ತರಕ್ಕೆ ಮರುಳಾದ ಹರಿಯಾಣ ಸಂಚಾರಿ ಪೊಲೀಸ್ ಇಲಾಖೆ ಇತ್ತೀಚೆಗೆ ರಾಜೇಶ್‌ನನ್ನು ಇಲಾಖೆಗೆ ನೇಮಕಮಾಡಿಕೊಂಡಿತು.

SCROLL FOR NEXT