ದೇಶ

ನಾಗರಿಕತ್ವ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

Lakshmi R

ನವದೆಹಲಿ: ಭಾರತೀಯ ಮೂಲದ ವ್ಯಕ್ತಿ(ಪಿಐಒ) ಮತ್ತು ಭಾರತದ ಸಾಗರೋತ್ತರ ನಾಗರಿಕತ್ವ(ಒಸಿಐ) ಯೋಜನೆಗಳನ್ನು ವಿಲೀನಗೊಳಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ.

ಗುಜರಾತ್‌ನಲ್ಲಿ ಭಾರತೀಯ ಮೂಲದವರ 3 ದಿನಗಳ ಸಮಾವೇಶ ಆರಂಭಕ್ಕೆ ಮುನ್ನವೇ ಈ ಸುಗ್ರೀವಾಜ್ಞೆಗೆ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ, ಭಾರತೀಯ ಮೂಲದ ವ್ಯಕ್ತಿಗಳಿಗೆ ಜೀವಿತಾವಧಿ ವೀಸಾ ಸಿಗುವುದಲ್ಲದೆ, ಪ್ರತಿ ಬಾರಿಯ ಭೇಟಿ ವೇಳೆ ಪೊಲೀಸ್ ಠಾಣೆಗೆ ಹೋಗಬೇಕಾದ ಆವಶ್ಯಕತೆ ಇರುವುದಿಲ್ಲ.

ಪಿಐಒ ಮತ್ತು ಒಸಿಐಯನ್ನು ವಿಲೀನಗೊಳಿಸುವುದಾಗಿ ನ್ಯೂಯಾರ್ಕ್ ಪ್ರವಾಸ ವೇಳೆ ಪ್ರಧಾನಿ ಮೋದಿ ಭರವಸೆ ನೀಡಿದ್ದರು.

ಇದೇ ವೇಳೆ, ನಾಗರೀಕತ್ವದ ಕಾಯ್ದೆಗೆ ತಂದ ತಿದ್ದುಪಡಿಯನ್ನು ವಿರೋಧಿಸಿ ಹಿರಿಯ ಪತ್ರಕರ್ತ ಎಸ್.ವೆಂಕಟ್‌ನಾರಾಯಣ್ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಕಾಯ್ದೆಯನ್ವಯ ಸಾಗರೋತ್ತರದಲ್ಲಿರುವ ಭಾರತೀಯರಿಗೆ ಮತದಾನ ಹಕ್ಕು ನಿರಾಕರಿಸಲಾಗಿದೆ. ಹೀಗಾಗಿ ತಿದ್ದುಪಡಿಯನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

SCROLL FOR NEXT