ಕುಟುಂಬದೊಂದಿಗೆ ಸಂಜಯ್ ದತ್ 
ದೇಶ

ಮತ್ತೆ ಪೆರೋಲ್ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ ಸಂಜಯ್ ದತ್

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ...

ಮುಂಬೈ: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ, ಬಾಲಿವುಡ್ ನಟ ಸಂಜಯ್ ದತ್ ಅವರು ಪೆರೋಲ್ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

14 ದಿನಗಳ ಪೆರೋಲ್ ಮೇಲೆ ಪುಣೆಯ ಯರವಾಡ ಜೈಲಿನಿಂದ ಹೊರಗೆ ಬಂದಿರುವ ಸಂಜಯ್ ದತ್, ಈಗ ಮತ್ತೆ ತಮ್ಮ ಪೆರೋಲ್ ಅವಧಿಯನ್ನು ಎರಡು ವಾರ ವಿಸ್ತರಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಂಜಯ್ ದತ್ ಅವರು ಡಿಸೆಂಬರ್ 24ರಂದು ಪೆರೋಲ್ ಮೇಲೆ ಹೊರಗಡೆ ಬಂದಿದ್ದು, ಅವರ ಪೆರೋಲ್ ಅವಧಿ ನಾಳೆ ಅಂತ್ಯಗೊಳ್ಳಲಿದೆ.

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ 42 ತಿಂಗಳು ಜೈಲು ಶಿಕ್ಷೆಗೆ ಒಳಗಾಗಿರುವ ಸಂಜಯ್ ದತ್ ಅವರು, ಪತ್ನಿ ಮಾನ್ಯತಾಳ ಅನಾರೋಗ್ಯದ ನೆಪ ಹೇಳಿ 2013ರ ಡಿ.21ರಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ನಂತರ ಮತ್ತೆ 2 ಬಾರಿ ಪೆರೋಲ್ ವಿಸ್ತರಿಸುವಂತೆ ಅರ್ಜಿ ಹಾಕಿದ್ದರು. ಹೀಗೆ ಒಟ್ಟು 3 ತಿಂಗಳ ಕಾಲ ಪೆರೋಲ್‌ನಲ್ಲಿ ಹೊರಗಿದ್ದರು. ಇದಲ್ಲದೆ ಕಳೆದ ಡಿಸೆಂಬರ್ 24ರಂದು 14 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದು, ಒಟ್ಟಿನಲ್ಲಿ ಅವರು ಮೇ, 2013ರಿಂದ ಮೇ, 2014ರವರೆಗೆ ಒಟ್ಟು 118ದಿನ ಜೈಲಿನಿಂದ ಹೊರಗಿದ್ದಾರೆ.

ಈ ಮಧ್ಯೆ, ಸಂಜಯ್ ದತ್‌ಗೆ ಪದೆಪದೇ ಪೆರೋಲ್ ನೀಡುತ್ತಿರುವ ಜೈಲು ಅಧಿಕಾರಿಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ದತ್ ಪೆರೋಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು- ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

ಉತ್ತರ ಪ್ರದೇಶ: CJP ಪ್ರತಿಭಟನಾಕಾರರ ತಂದೆಯ ಮೇಲೆ ಹಲ್ಲೆ; ಹಿಂದುತ್ವ influencer ಸ್ವತಂತ್ರ ಭಾರಧ್ವಾಜ್ ಬಂಧನ

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video

ನೇಪಾಳದಲ್ಲಿ 'ಕೃಷ್ಣಜನ್ಮಾಷ್ಟಮಿಯಂದು ದೊಡ್ಡ ಪವಾಡ! ಅನ್ನ, ನೀರು, ಇಲ್ಲದೆ 9 ದಿನಗಳಿಂದ 'ಹರೇ ಕೃಷ್ಣ' ಮಂತ್ರ ಪಠಿಸುತ್ತಲೇ ಬದುಕುಳಿದ ಕಾರ್ಮಿಕನ ರಕ್ಷಣೆ