ದೇಶ

ಏರ್ ಏಷ್ಯಾ ವಿಮಾನದ ಎರಡೂ ಬ್ಲ್ಯಾಕ್ಸ್ ಬಾಕ್ಸ್ ಪತ್ತೆ

Lingaraj Badiger

ಜಕಾರ್ತ್: 16 ದಿನಗಳ ಹಿಂದೆ ಸಮುದ್ರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತನಗೊಂಡಿದ್ದ ಏರ್ ಏಷ್ಯಾ ವಿಮಾನದ ಅವಶೇಷಗಳಿಂದ ಎರಡೂ ಬ್ಲ್ಯಾಕ್ ಬಾಕ್ಸ್ ಅನ್ನು ಹೊರ ತೆಗೆಯುವಲ್ಲಿ ನೌಕಾ ಸಿಬ್ಬಂದಿ ಸೋಮವಾರ ಯಶಸ್ವಿಯಾಗಿದ್ದಾರೆ.

ನಿನ್ನೆ ಜಾವಾ ಸಮುದ್ರದಲ್ಲಿ 30ರಿಂದ 32 ಅಡಿ ಆಳದಲ್ಲಿ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ನೌಕಾ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಅವಶೇಷಗಳಿಂದ ಬಾಕ್ಸ್‌ಗಳನ್ನು ಬೇರ್ಪಡಿಸಲು ಸಾಧ್ಯವಾಗಿರಲಿಲ್ಲ. ಇಂದು ಪುನಾ ಕಾರ್ಯಾಚರಣೆಗಿಳಿದ ಸಿಬ್ಬಂದಿ, ವಿಮಾನದ ಅವಶೇಷಗಳಿಂದ ಎರಡೂ ಬ್ಲ್ಯಾಕ್ ಬಾಕ್ಸ್‌ಗಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವಿಮಾನ ಪತನದ ಹಿಂದಿನ ರಹಸ್ಯ ಪತ್ತೆ ಹಚ್ಚುವಲ್ಲಿ ತನಿಖಾ ತಂಡಕ್ಕೆ ಮಹತ್ವದ ಗೆಲವು ಸಿಕ್ಕಂತಾಗಿದೆ.

ಏರ್ ಏಷ್ಯಾ ವಿಮಾನ ಡಿಸೆಂಬರ್ 28ರಂದು ಸುರಬಯಾದಿಂದ ಸಿಂಗಾಪುರಕ್ಕೆ ಸಾಗುತ್ತಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 162 ಮಂದಿ ಮೃತಪಟ್ಟಿದ್ದರು.

SCROLL FOR NEXT