ಶಶಿ ತರೂರ್ 
ದೇಶ

ಸ್ವಾಮಿಗೆ ಸುನಂದಾ ಹಂತಕ ಯಾರೆಂದು ತಿಳಿದಿದ್ರೆ ಬಹಿರಂಗಪಡಿಸಲಿ: ಶಶಿ ತರೂರ್

ನವದೆಹಲಿ: ಸುನಂದಾ ಪುಷ್ಕರ್ ಹಂತಕ ಯಾರೆಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ತಿಳಿದಿದ್ರೆ ಬಹಿರಂಗಪಡಿಸಲಿ ಎಂದು ಶಶಿ ತರೂರ್ ತಿರುಗೇಟು ನೀಡಿದ್ದಾರೆ.

ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ಶಶಿ ತರೂರ್ ಸ್ವಾಮಿಗೆ ಸುನಂದಾ ಹಂತಕರು ಯಾರೆಂದು ತಿಳಿದಿದ್ರೆ ಪೊಲೀಸರ ಮುಂದೆ ಬಹಿರಂಗ ಪಡಿಸಲಿ ಎಂದಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಸ್ವಾಮಿ ಯಾರು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮಿ,  ಸುನಂದಾ ಶಶಿ ತರೂರ್ ಕೊಲೆ ಮಾಡಿದ್ದಾರೆಂದು ನಾನು ಹೇಳಿಲ್ಲ, ಆದರೆ ಶಶಿ ತರೂರ್‌ಗೆ ಹಂತಕರು ಯಾರೆಂದು ಗೊತ್ತಿದೆ. ಶಶಿ ತರೂರ್ ಬಾಯಿಬಿಟ್ಟರೆ ಏಳು ನಾಯಕರು ಸಿಕ್ಕಿಬೀಳುತ್ತಾರೆ ಎಂದು ಸ್ವಾಮಿ ಹೇಳಿದರು.

 ತರೂರ್ ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳುಗಳ ಕಂತೆಯನ್ನು ಸೃಷ್ಟಿಸಿದ್ದಾರೆ ಎಂದು ಸ್ವಾಮಿ ಶನಿವಾರ ಆರೋಪಿಸಿದ್ದರು. ತರೂರ್‌ಗೆ ಸುನಂದಾರನ್ನು ಕೊಲೆ ಮಾಡಿದ್ದು ಯಾರೆಂದು ಗೊತ್ತಿದ್ದು, ಹತ್ಯೆಗೆ ನೆರವಾಗಿದ್ದಾರೆ. ಅವರು ಸುಳ್ಳುಗಳನ್ನು ಹೇಳುವ ಮೂಲಕ ಪ್ರಕರಣ ಮುಚ್ಚಲು ಪ್ರಯತ್ನಿಸಿದ್ದರಿಂದ ಅವರನ್ನು ಕೂಡ ಜೈಲಿಗೆ ಕಳಿಸಬೇಕು, ಆದರೆ ಮರಣ ದಂಡನೆ ಇರುವುದಿಲ್ಲ ಎಂದು ಸ್ವಾಮಿ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT