ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಂ ರಾಜನ್ ಅವರಿಗೆ 2015ರ 'ವರ್ಷದ ಗವರ್ನರ್' ಪ್ರಶಸ್ತಿ ಸಂದಿದೆ.
ದೇಶದ ಆರ್ಥಿಕ ಸಮಸ್ಯೆಗಳ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡಿರುವ ಹಾಗೂ ತಮ್ಮ ನಾಯಕತ್ವದ ಶೈಲಿಯಿಂದ ಎಲ್ಲರ ಗಮನ ಸೆಳೆದ ರಘುರಾಂ ರಾಜನ್ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ 'ಸೆಂಟ್ರಲ್ ಬ್ಯಾಂಕಿಂಗ್' ಎಂಬ ಬ್ರಿಟನ್‌ನ ನಿಯತಕಾಲಿಕೆ ಹೇಳಿದೆ.
ಇದು ಲಂಡನ್ ಮೂಲದ ನಿಯತಕಾಲಿಕೆ ಪ್ರಕಟಿಸುತ್ತಿರುವ ಎರಡನೇ ಪ್ರಶಸ್ತಿಯಾಗಿದ್ದು, ಮಾ.12ರಂದು ಬ್ರಿಟನ್ ರಾಜಧಾನಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜನ್, ನನಗೆ ಬಹಳ ಸಂತೋಷವಾಗಿದೆ.
ಇದೆಲ್ಲವೂ ಸಾಮೂಹಿಕ ಪ್ರಯತ್ನದ ಫಲ ಎಂದಿದ್ದಾರೆ.