ದೇಶ

ಇನ್ನು 3 ತಿಂಗಳು ತಾಯ್ನಾಡಿಗೆ ಮರಳಲು ಇಟಲಿ ನಾವಿಕರಿಗೆ ಸುಪ್ರೀಂ ಅನುಮತಿ

Mainashree

ನವದೆಹಲಿ: ಕೊಲೆ ಆರೋಪ ಎದುರಿಸುತ್ತಿರುವ ಇಟಲಿಯ ಇಬ್ಬರು ನಾವಿಕರು ಇನ್ನು ಮೂರು ತಿಂಗಳು ಕಾಲ ಇಟಲಿಯಲ್ಲೇ ಉಳಿಯಬಹುದು.

ಕೇರಳ ಮೀನುಗಾರರ ಕೊಲೆ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕರಿಬ್ಬರ ಅವಧಿ ವಿಸ್ತರಣೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇನ್ನು ಮೂರು ತಿಂಗಳು ಕಾಲ ಇಟಲಿಯಲ್ಲಿ ಉಳಿಯಲು ಅನುಮತಿ ನೀಡಿದೆ.

ಅನಾರೋಗ್ಯ ಕಾರಣ ಇಟಲಿಯಲ್ಲಿರುವ ಅವಧಿಯಲ್ಲಿ ವಿಸ್ತರಣೆ ಮಾಡಬೇಕೆಂದು ಲಟ್ಟೋರ ಮತ್ತು ಮರೈನ್ ಸಾಲ್ವಟೋರ್ ಗಿರೋನ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಇಟಲಿಯಲ್ಲಿರಲು ಮೂರು ತಿಂಗಳ ಅವಧಿ ವಿಸ್ತರಿಸಿದೆ.

ಲಟ್ಟೋರ ಜನವರಿ 5ರಂದು ಹೃದಯ ಶಸ್ತ್ರ ಚಿಕಿತ್ಸೆ ಒಳಗಾಗಿದ್ದರು. ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ ಈ ಹಿನ್ನಲೆಯಲ್ಲಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು.

SCROLL FOR NEXT