ದೇಶ

ನೈತಿಕ ಪೊಲೀಸ್ ಗಿರಿ: ಮಹಿಳೆಗೆ ಸಾರ್ವಜನಿಕ ಥಳಿತ

ಮುಂಬೈ: ಸಾರ್ವಜನಿಕ ಪ್ರದೇಶವೊಂದರಲ್ಲಿ ಯುವಕನೊಂದಿಗಿದ್ದ ಮಹಿಳೆಗೆ ಯುವಕರ ಗುಂಪೊಂದು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಲಾತುರ್ ಜಿಲ್ಲೆಯಲ್ಲಿ ಡಿ 30ರಂದು ಮಹಿಳೆಯೊಬ್ಬಳು ತನ್ನ ಗೆಳೆಯನೊಂದಿಗೆ ಏಕಾಂತದಲ್ಲಿ ಕಾಲಕಳೆಯುತ್ತಿದ್ದನ್ನು ಕಂಡ 6 ಜನರ ಯುವಕರ ಗುಂಪು ಯುವತಿಯನ್ನು ಎಳೆದು ಥಳಿಸಿದ್ದಾರೆ. ನಂತರ ಅದರ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಲ್ಲದೆ, ಘಟನೆಯನ್ನು ಖಂಡಿಸುವಂತೆ ತಿಳಿಸಿ ಮಹಿಳೆಗೆ ಅವಮಾನಿಸಿದ್ದಾರೆ.

ಈ ವಿಡಿಯೋವನ್ನು ಕಂಡ ಸ್ಥಳೀಯ ಮಾಧ್ಯಮವೊಂದು ಘಟನೆ ಕುರಿತಂತೆ ವರದಿ ಮಾಡಿದ್ದು, ತದನಂತರ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಸ್ತುತ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಘಟನೆಯ ವೀಡಿಯೋವನ್ನು ಕಂಡು ನನಗೆ ತುಂಬಾ ಆಶ್ಚರ್ಯವಾಯಿತು. ಪ್ರಕರಣದಲ್ಲಿ ಯಾರೊಬ್ಬ ಆರೋಪಿಯನ್ನು ಬಿಡದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜ ಮುಂಡೆ ತಿಳಿಸಿದ್ದಾರೆ.

SCROLL FOR NEXT