ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಸಬ್ಸಿಡಿ ಕಡಿತ: ಜೇಟ್ಲಿ ಸುಳಿವು

ಬಜೆಟ್ ಮಂಡನೆಗೆ ಇನ್ನೇನು ಒಂದು ತಿಂಗಳಷ್ಟೇ ಬಾಕಿ ಇದೆ. ಅದರ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ..

ನವದೆಹಲಿ: ಬಜೆಟ್ ಮಂಡನೆಗೆ ಇನ್ನೇನು ಒಂದು ತಿಂಗಳಷ್ಟೇ ಬಾಕಿ ಇದೆ. ಅದರ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ ಕೆಲವು ವಿಶೇಷ ಹೆಜ್ಜೆಗಳನ್ನಿಡಲು ಮುಂದಾಗಿದೆ. ಅವುಗಳಲ್ಲಿ ಸಬ್ಸಿಡಿ ವ್ಯವಸ್ಥೆಯ ಪರಿಷ್ಕರಣೆಯೂ ಸೇರಿದೆ. ಮೂಲಸೌಂಕರ್ಯದ ಮೇಲೆ ಮಾಡಲಾಗುವ ವೆಚ್ಚವನ್ನು ಹೆಚ್ಚಿಸಲು, ಹಾಗೂ ಸಬ್ಸಿಡಿಗಳನ್ನು ನ್ಯಾಯಸಮ್ಮತಗೊಳಿಸಲು ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸುಳಿವು ನೀಡಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.

ಚೆನ್ನೈನಲ್ಲಿ ಸೋಮವಾರ ಮಾತನಾಡಿದ ಸಚಿವ ಜೇಟ್ಲಿ, ಎಲ್ಲ ಬಗೆಯ ಸಬ್ಸಿಡಿಯನ್ನೂ ಪರಿಷ್ಕರಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಹೆಜ್ಜೆ ಇಡಲಿದೆ. ವಿತ್ತೀಯ ಕೊರತೆ ಹೆಚ್ಚಿರುವ ಈ ಸಂದರ್ಭದಲ್ಲಿ ಇದು ಸವಾಲಿನ ಕೆಲಸ. ಆದರೂ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾವು ಸರಿಪಡಿಸಬೇಕಿದೆ ಎಂದಿದ್ದಾರೆ. ಇದೇ ವೇಳೆ, ನ್ಯಾಯ ಸಮ್ಮತ ಸಬ್ಸಿಡಿ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಜ.1ರಿಂದ ಎಲ್‌ಪಿಜಿ ಸಬ್ಸಿಡಿಯು ನೇರವಾಗಿ ಗ್ರಾಹಕರ ಖಾತೆಗೆ ಜಮೆಯಾಗುತ್ತಿದೆ. ಉಳಿದ ಸಬ್ಸಿಡಿಗಳನ್ನೂ ನಾವು ಪರಿಷ್ಕರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಯೂರಿಯಾ ಕೂಡ ನಿಯಂತ್ರಣ ಮುಕ್ತ?
ಪೆಟ್ರೋಲ್ ಮತ್ತು ಡೀಸೆಲ್ ಬಳಿಕ ಈಗ ಯೂರಿಯಾವನ್ನು ಕೂಡ ನಿಯಂತ್ರಣ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 3 ವರ್ಷಗಳಲ್ಲಿ ಹಂತ ಹಂತವಾಗಿ ಇದನ್ನು ಜಾರಿ ಮಾಡಲು ಯೋಜಿಸಲಾಗಿದೆ. ಯೂರಿಯಾದ ಶುಲ್ಕ ರಹಿತ ಆಮದಿಗೆ ಅವಕಾಶ ಕಲ್ಪಿಸುವ, ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಯೋಚನೆಯೂ ಸರ್ಕಾರಕ್ಕಿದೆ. 3 ವರ್ಷಗಳ ಅವಧಿಯಲ್ಲಿ ಎಲ್ಲ ಭೂದಾಖಲೆಗಳು ಹಾಗೂ ರೈತರ ಮಣ್ಣಿನ ಗುಣಲಕ್ಷಣಗಳ ಕಾರ್ಡ್ (ಸಾಯಿಲ್ ಹೆಲ್ತ್ ಕಾರ್ಡ್)ಗಳನ್ನು ಡಿಜಿಟಲೀಕರಣ ಮಾಡಲಾಗುವುದು.

10 ಲಕ್ಷವಷ್ಟೇ ಮನೆಯಲ್ಲಿರಬಹುದು!
ಇನ್ನು ಮುಂದೆ ನಾಗರೀಕರು ರು.10 ಲಕ್ಷ ನಗದನ್ನಷ್ಟೇ ಮನೆಯಲ್ಲಿಟ್ಟುಕೊಳ್ಳಬಹುದು ಅಥವಾ ತಮ್ಮ ಜತೆ ಕೊಂಡೊಯ್ಯಬಹುದು. ಕಪ್ಪುಹಣದ ಹರಿವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಬಜೆಟ್‌ನಲ್ಲಿ ಇಂತಹುದೊಂದು ಪ್ರಸ್ತಾಪ ಮುಂದಿಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, 1ಲಕ್ಷಕ್ಕಿಂತ ಹೆಚ್ಚಿನ ಖರೀದಿಗೆ ಗ್ರಾಹಕರು ತಮ್ಮ ಪ್ಯಾನ್ ಸಂಖ್ಯೆಯನ್ನು ಕೊಡುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತರಲೂ ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಯಾವುದೇ ವ್ಯಕ್ತಿಯ ಮನೆಯಲ್ಲಿ 10 ಲಕ್ಷಕ್ಕಿಂತ ಅಧಿಕ ನಗದು ಕಂಡುಬಂದರೆ ಅಂಥವರಿಗೆ ಭಾರಿ ದಂಡವಿಧಿಸಲು ನಿರ್ಧರಿಸಲಾಗಿದೆ. ನಾಗರಿಕರ ದೈನಂದಿನ ಚಟುವಟಿಕೆಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಒಬ್ಬ ವ್ಯಕ್ತಿಯು ಮನೆಯಲ್ಲಿ ಇಟ್ಟುಕೊಳ್ಳಬಹುದು ಹಣಕ್ಕೆ ಯಾವುದೇ ಮಿತಿ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT