ಆರೋಪಿ ಪ್ರತೀಕ್ ಮಾಥೂರ್ 
ದೇಶ

ಮಹಿಳೆಗೆ ವಂಚನೆ ಆರೋಪಿ ಬಂಧನ

ಅಮೆರಿಕದ ಸಿಐಎ ಸಂಸ್ಥೆ ಏಜೆಂಟ್ ಎಂದು ಹೇಳಿಕೊಂಡು ನಗರದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ...

ಬೆಂಗಳೂರು: ಅಮೆರಿಕದ ಸಿಐಎ ಸಂಸ್ಥೆ ಏಜೆಂಟ್ ಎಂದು ಹೇಳಿಕೊಂಡು ನಗರದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಮುಂಬೈ ಮೂಲದ ವಕೀಲನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಬಾಂದ್ರಾ ನಿವಾಸಿ ಪ್ರತೀಕ್ ಮಾಥೂರ್ (28) ಬಂಧಿತ. ಜೆ.ಪಿ ನಗರದಲ್ಲಿ ವಾಸವಿರುವ 47 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದರು.

ಆರೋಪಿ ತಾನು ಪೈಲಟ್ ಎಂದು ಹೇಳಿಕೊಂಡಿದ್ದು ವೆಬ್‌ಸೈಟ್‌ವೊಂದರ ಮೂಲಕ ಮಹಿಳೆಗೂ ಆರೋಪಿಗೂ ಪರಿಚಯವಾಗಿತ್ತು. ಮಹಿಳೆಯ ಸಂಸಾರದಲ್ಲಿ ಬಿರುಕು ಇದ್ದ ಕಾರಣ ಪತಿಯಿಂದ ದೂರವಾಗಿ ಒಂಟಿಯಾಗಿ ನೆಲೆಸಿದ್ದರು. ಆರೋಪಿಯನ್ನು ನಂಬಿ ಆತನ ಜಾಲಕ್ಕೆ ಸಿಲುಕಿದ್ದರು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಮಾಡಿದ್ದರು.

ಈ ಮೂಲಕ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಅಲ್ಲದೇ, ಮಹಿಳೆಗೆ ತನ್ನ ಪತಿಯಿಂದ ದೂರವಾಗಲು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನೆರವಾಗಿದ್ದ. ವಿಚ್ಛೇದನ ಆಗುತ್ತಿದ್ದಂತೆ ಮದುವೆ ಮಾಡಿಕೊಳ್ಳೋಣ ಎಂದು ಹುಸಿ ಭರವಸೆ ನೀಡಿದ್ದ.

ಮದುವೆಯಾದ ಮೇಲೆ ಮುಂಬೈನಲ್ಲಿ ಉಳಿದುಕೊಳ್ಳು ಫ್ಲ್ಯಾಟ್ ಖರೀದಿಸುತ್ತಿರುವುದಾಗಿ ನಂಬಿಸಿದ್ದ. ಅದಕ್ಕೆ ಅಗತ್ಯವಿರುವ 2.9 ಲಕ್ಷ ಹಣ ಕೇಳಿದ್ದ. ಮಹಿಳೆ ಅದನ್ನು ನಂಬಿ ಹಣ ನೀಡಿದ್ದರು. ಆದರೆ, ಇತ್ತೀಚೆಗೆ ಪ್ರತೀಕ್ ಪೈಲಟ್ ಅಲ್ಲ ಎನ್ನುವುದು ತಿಳಿದು ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿ ತಾನು ಸಿಐಎ ಏಜೆಂಟ್ ಆಗಿದ್ದು ಅಮೆರಿಕಾದಿಂದ ಗುಪ್ತ ಕಾರ್ಯಾಚರಣೆ ಮೇಲೆ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದ.

ಅಲ್ಲದೇ ಸಿಐಎ ಸಂಸ್ಥೆ ಸೀಲ್ ಇರುವ ದಾಖಲೆ ಪತ್ರಗಳನ್ನು ತೋರಿಸಿದ್ದ. ಈ ಬಗ್ಗೆ ಅನುಮಾನಗೊಂಡ ಮಹಿಳೆ, ಹಣವನ್ನು ವಾಪಸ್ ಮಾಡು ಎಂದು ಕೇಳಿದ್ದಾಳೆ. ಆರೋಪಿ, ಮಹಿಳೆಯ ಫೇಸ್‌ಬುಕ್, ಇ ಮೇಲೆ ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಹಲವು ಫೋಟೋ ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಅಲ್ಲದೇ, ಕೆಲವು ಆಕ್ಷೇಪಾರ್ಹ ಫೋಟೋಗಳನ್ನು ತನ್ನೊಂದಿಗೆ ಇರಿಸಿಕೊಂಡು ಇನ್ನಷ್ಟು ಹಣ ನೀಡಬೇಕು ಎಂದು ಬೆದರಿಸುತ್ತಿದ್ದ. ಈ ಬಗ್ಗೆ ಮಹಿಳೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಳಿ ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿರುವ ಹಲವು ಫೋಟೋಗಳು ದೊರಕಿವೆ.

ಆರೋಪಿ ಇನ್ನೂ ಹಲವು ಯುವತಿಯರನ್ನು ವಂಚಿಸಿರುವ ಸಾಧ್ಯತೆ ಇದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸಿ ಬಾಯ್ಬಿಡಿಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಪ್ರತೀಕ್‌ಗೆ ವಿವಾಹವಾಗಿದ್ದು ಇಬ್ಬರು ಮಕ್ಕಳೊಂದಿಗೆ ಮುಂಬೈನ ಬಾಂದ್ರಾದಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

B-52 Bomber Bursts: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ವಿಮಾನ ಅಪಘಾತ, ಬಿ-52 ಬಾಂಬರ್ ಪತನ, 8 ಮಂದಿ ಸಾವು! Video

'ಆಸ್ತಿ ಘೋಷಿಸಲು ಕುಮಾರಸ್ವಾಮಿ ಸಿದ್ಧವೇ?: ಡಿಕೆ ಶಿವಕುಮಾರ್ ನಿಮ್ಮ ಇಡೀ ಕುಟುಂಬದ ಜಾತಕ ಬಿಚ್ಚಿಡಲಿದ್ದಾರೆ'

NEET UG 2026: 'ಲೀಕ್' ತಡೆಯಲು ಮರು ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಮ್ ಆ್ಯಪ್ ನಿಷೇಧ; ಇಲ್ಲಿದೆ ಕಾರಣ

15 ಕೋಟಿ ರೂ. ಕೊಟ್ರೆ ದುಬೈ ಶೇಖ್ ಜೊತೆ ಮಲಗಬಹುದು! Influencer ಅಪೂರ್ವ ಮುಖಿಜಾ Video ಮತ್ತೆ ವೈರಲ್! ಏನಿದು ಹೊಸ ವಿವಾದ?

TIME ಮ್ಯಾಗಜಿನ್ ನ 100 ಅತ್ಯಂತ ಪ್ರಭಾವಿ ಕ್ರೀಡಾ ವ್ಯಕ್ತಿಗಳ ಪಟ್ಟಿ ಪ್ರಕಟ! ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿ

SCROLL FOR NEXT