ಬೆಂಗಳೂರು: ಚಾಮರಾಜಪೇಟೆ ನಂಜಾಂಬ ಅಗ್ರಹಾರದ ನಿವಾಸಿ ಚಂದ್ರಶೇಖರ್ (36) ಹಾಗೂ ಶ್ರೀನಗರ ಕಾಳಿದಾಸ ಬಡಾವಣೆ ̄ವಾಸಿ ಮಧುಸೂಧನ್ (27) ಬಂಧಿತರು. ಅವರ ಬಳಿಯಿಂದ 1 ಏರ್ ಪಿಸ್ತೂಲ್ 160 ಗುಂಡುಗಳು ಸೇರಿದಂತೆ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನ ವಶಪಡಿಸಿ ಕೊಂಡಿದ್ದಾರೆ.
ಕೆಂಪೇಗೌಡನಗರ ನಂಜಾಂಬ ಅಗ್ರಹಾರದಲ್ಲಿ, ರೌಡಿ ಚಂದ್ರಶೇಖರ ತನ್ನ ಸಹಚರರೊಂದಿಗೆ ಶ್ರೀಮಂತರನ್ನು ತಡೆದು ದರೋಡೆಗೆ ಸಜ್ಜಾಗಿಗ್ಗ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಅವರ ಸಹಚರರಾದ ಶ್ರೀಕಾಂತ, ಗಂಗಾಧರ, ಮಂಜುನಾಥ, ಎಂಬುವವರು ತಲೆಮರೆಸಿಕೊಂಡಿದ್ದಾರೆ. ಚಂದ್ರಶೇಖರ್ ವಿರುದ್ಧ ಕೆಂಪೇಗೌಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವೇಡಿ ಯಪ್ಪನ್ ಎಂಬಾತನ ಕೊಲೆ ಆರೋಪವಿದೆ. ಅಲ್ಲದೇ, 2013ರಲ್ಲಿ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿ ಸರ್ಕಲ್ ಗಿರಿ ಕೊಲೆ ಪ್ರಕಣದಲ್ಲಿ ಎಲ್ಲ ಆರೋಪಿಗಳು ಭಾಗಿಯಾಗಿದ್ದಾರೆ.