ದೇಶ

ಹಾಟ್‍ಲೈನ್ ಸ್ಥಾಪಿಸಲು ಒಪ್ಪಿಗೆ

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ನರೇಂದ್ರ ಮೋದಿ ನಡುವೆ ಹಾಟ್‍ಲೈನ್ ಸ್ಥಾಪಿಸಲು ಉಭಯ ದೇಶಗಳೂ ಒಪ್ಪಿಗೆ ಸೂಚಿಸಿವೆ. ನನ್ನ, ಬರಾಕ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತುಕತೆಗೆ ಹಾಟ್‍ಲೈನ್ ಸ್ಥಾಪಿಸಲಿದ್ದೇವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಪ್ರಕಟಿಸಿದ್ದಾರೆ.

ಅಮೆರಿಕ ಮತ್ತು ಭಾರತ ನಡುವೆ ಈ ರೀತಿಯ ಹಾಟ್‍ಲೈನ್ ವ್ಯವಸ್ಥೆ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಈ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಮೋದಿ, ಎರಡೂ ದೇಶಗಳ ನಡುವೆ ಪ್ರಮುಖ ಸಹಭಾಗಿತ್ವ ಸಾಧಿಸುವ ಪ್ರಕ್ರಿಯೆಯ ಭಾಗ ಎಂದು ಹೇಳಿದ್ದಾರೆ.

ನಾವು ಈ ಮಹತ್ವದ ಸಹಭಾಗಿತ್ವಕ್ಕೆ ಹೊಸ ಭಾಷ್ಯ ಮತ್ತು ಹೆಚ್ಚಿನ ಗಮನಕೊಡಲು ಹಾಟ್‍ಲೈನ್ ಸ್ಥಾಪಿಸಿದ್ದೇವೆ. ಜತೆಗೆ, ಭಾರತ ಮತ್ತು ಅಮೆರಿಕ ನಡುವೆ ನಿಯಮಿತವಾಗಿ ಶೃಂಗಗಳು ನಡೆಯಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

SCROLL FOR NEXT