ನವದೆಹಲಿ: 66ನೇ ಗಣರಾಜ್ಯೋತ್ಸವ ಅಂಗವಾಗಿ ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಯೋಧರು ಫ್ಲ್ಯಾಗ್ ಮಾರ್ಚ್ ನಡೆಸಿದರು.
ಭಾರತದ ಕಡೆಯಿಂದ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆ ಮೊಳಗುತ್ತದೆ. ಪಾಕ್ ಕಡೆಯಿಂದ ಘೋಷಣೆಗಳು ಮೊಳಗುತ್ತದೆ. ಏಕಕಾಲಕ್ಕೆ ಭಾರತ ಮತ್ತು ಪಾಕಿಸ್ತಾನದ ಧ್ವಜಾರೋಹಣ ನೆರವೇರಿಸಲಾಯಿತು.
ಸೈನಿಕರು ಪರಸ್ಪರ ಸಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಎರಡೂ ರಾಷ್ಟ್ರಗಳ ಸೈನಿಕರು ಆಕರ್ಷಕ ಪಥಸಂಚಲನ ನಡೆಸಿದರು. ವಾಘಾ ಗಡಿಯಲ್ಲಿ ಪ್ರತಿವರ್ಷ ನಡೆಯುವ ಸಂಭ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.
ಭಾರತದ ವಿರುದ್ಧ ಪಾಕಿಸ್ತಾನ ಆಗಾಗ್ಗೆ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸುತ್ತಾ ಕಾಲು ಕೆರೆದುಕೊಂಡು ಜಗಳವಾಡುತ್ತಿದ್ದರೂ, ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನದಂದು ಮಾತ್ರ ಪರಸ್ಪರ ಸ್ನೇಹಭಾವದಿಂದ ವರ್ತಿಸುತ್ತವೆ. ಭಾರತದ ಸೈನಿಕರು ಪಾಕ್‌ನ ಶತ್ರುತ್ವವನ್ನು ಮರೆತು ಮಿತ್ರರಂತೆ ವರ್ತಿಸುತ್ತಾರೆ. ಪರಸ್ಪರ ಭಾಯ್, ಭಾಯ್ ಹೇಳುತ್ತಾರೆ. ಸಮಾರಂಭದ ನಂತರ ವಾಘಾ ಗಡಿಯ ಎರಡೂ ಗೇಟುಗಳು ಮುಚ್ಚಿಕೊಂಡು ಅಂತಿಮ ತೆರೆ ಎಳೆಯಲಾಗುತ್ತದೆ.