ದೇಶ

ಸ್ಪೇನ್‌ನಲ್ಲಿ ಜೆಟ್ ಅಪಘಾತ: 10 ಪೈಲಟ್‌ಗಳ ಸಾವು

ಗ್ರೀಕ್ ನ ಫೈಟರ್ ಜೆಟ್ ಅಪಘಾತಕ್ಕೀಡಾಗಿ 10 ಪೈಲೆಟ್ ಗಳು ಸ್ಥಳದಲ್ಲೇ ಸಾವನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ...

ಮ್ಯಾಡ್ರಿಕ್ : ಗ್ರೀಕ್ ನ ಫೈಟರ್ ಜೆಟ್ ಅಪಘಾತಕ್ಕೀಡಾಗಿ 10 ಪೈಲೆಟ್ ಗಳು ಸ್ಥಳದಲ್ಲೇ ಸಾವನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ ಕೇಂದ್ರದ ವಾಯು ನೆಲೆಯಲ್ಲಿ ನಡೆದಿದೆ.

ಸ್ಪೇನ್ ನ ನ್ಯಾಟೊ ಪೈಲಟ್ ತರಬೇತಿ ಕೇಂದ್ರದ ವಾಯು ನೆಲೆಯಲ್ಲಿ ಸಂಭವಿಸಿದ ಗ್ರೀಕ್‌ನ ಫೈಟರ್ ಜೆಟ್ ಅಪಘಾತಕ್ಕಿಡಾಗಿದ್ದು, ಫ್ರಾನ್ಸ್‌ನ 8 ಮಂದಿ ಹಾಗೂ ಗ್ರೀಕ್‌ನ ಇಬ್ಬರು ಸೇರಿ ಒಟ್ಟು 10 ಮಂದಿ ತರಬೇತಿ ಪಡೆಯುತ್ತಿದ್ದ ಪೈಲಟ್‌ಗಳು ಸಾವನ್ನಪ್ಪಿದ್ದಾರೆ.   

ಎಫ್-16 ಫೈಟರ್‌ಜೆಟ್ ವಾಯು ನೆಲೆಯಿಂದ ಟೇಕ್ ಆಫ್ ಆಗುತ್ತಿದ್ದಂತೆಯೇ ನೈರುತ್ಯ ದಿಕ್ಕಿನ ಹೆಲ್‌ಬೆಸೆಟ್ ನಗರದ ಬಳಿ ದುರಂತಕ್ಕೀಡಾಯಿತು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.  

ಜೆಟ್ ಇದ್ದಕ್ಕಿದ್ದಂತೆ ಬೇರೆ ವಿಮಾನಗಳು ನಿಂತಿದ್ದ ಪ್ರದೇಶದಲ್ಲಿ ಪತನಗೊಂಡಿದ ಪರಿಣಾಮ ಇತರ 5 ವಿಮಾನಗಳು ಜಖಂ ಆಗಿವೆ ಎಂದು ಮೂಲಗಳು ಹೇಳಿವೆ.

ಜೆಟ್ ನ ಎಂಜಿನ್ ವೈಫಲ್ಯದಿಂದಾಗಿ ಬೆಂಕಿ ಹೊತ್ತಿಕೊಂಡು ಕೆಳಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೃತರಲ್ಲಿ ಮೂವರು ಕ್ಯಾಪ್ಟನ್‌ಗಳು, ಒಬ್ಬರು ಲೆಫ್ಟಿನೆಂಟ್ ಹಾಗೂ ಪೈಲಟ್‌ಗಳು ಸೇರಿದ್ದಾರೆ. ಘಟನೆಯಲ್ಲಿ ಇಟಲಿಯ 11 ಹಾಗೂ ಫ್ರಾನ್ಸ್‌ನ 10 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!