ಕಲ್ಲಿದ್ದಲು ಹಗರಣ ತನಿಖಾ ಪ್ರಗತಿ ವರದಿ ವಿಶೇಷ ನ್ಯಾಯಾಲಯಕ್ಕೆ 
ದೇಶ

ಕಲ್ಲಿದ್ದಲು ಹಗರಣ: ವಿಶೇಷ ಕೋರ್ಟ್‌ಗೆ ವರದಿ ಸಲ್ಲಿಸಿದ ಸಿಬಿಐ

ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣ ಕುರಿತ ಪ್ರಗತಿ ವರದಿಯನ್ನು ಸಿಬಿಐ ಮುಚ್ಚಿದ...

ನವದೆಹಲಿ: ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣ ಕುರಿತ ಪ್ರಗತಿ ವರದಿಯನ್ನು ಸಿಬಿಐ ಮುಚ್ಚಿದ ಲಕೋಟೆಯಲ್ಲಿರಿಸಿ ಮಂಗಳವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣದ ಬೆಳವಣಿಗೆಗಳ ಕುರಿತ ಪ್ರಗತಿ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವಂತೆ 2014ರ ಡಿಸೆಂಬರ್ 16 ರಂದು ಸಿಬಿಐಗೆ ಆದೇಶ ನೀಡಿತ್ತು. ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕಲ್ಲಿದ್ದಲು ಖಾತೆಯನ್ನು ನಿರ್ವಹಿಸುತ್ತದ್ದ ವೇಳೆ ಹಿಂಡಾಲ್ಕೋಗೆ ತಲಾಬ್ರಿಯಾ 2 ಮತ್ತು 3 ಕಲ್ಲಿದ್ದಲು ಬ್ಲಾಕ್ ಹಂಚಿಕೆಯಾಗಿರುವುದರಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹಾಗೂ ಉನ್ನತ ಪಿಎಂಓ ಅಧಿಕಾರಿಗಳನ್ನು ಪ್ರಶ್ನಿಸುವಂತೆ ಸೂಚನೆ ನೀಡಿತ್ತು.

ನ್ಯಾಯಾಲಯದ ಆದೇಶದಂತೆ ಸಿಬಿಐ ಅಧಿಕಾರಿಗಳು ಎರಡು ದಿನಗಳ ಕಾಲ ಮನ ಮೋಹನ್‌ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿದ್ದರು.

ಏನಿದು ಪ್ರಕರಣ?

ಉದ್ಯಮಿ ಕುಮಾರ ಮಂಗಲಂ ಬಿರ್ಲಾಗೆ ಸೇರಿದ ಹಿಂಡಾಲ್ಕೋ ಕಂಪನಿಗೆ ವಿತರಸಲಾಗಿದ್ದ ತಲಬಿರಾ-2 ಬ್ಲಾಕ್‌ಗೆ ಸಂಬಂಧಿಸಿ ಸಿಂಗ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ಬ್ಲಾಕ್ ಹಂಚಿಕೆ ವೇಳೆ ಕಲ್ಲಿದ್ದಲು ಖಾತೆಯನ್ನು ಪ್ರಧಾನಿಯಾಗಿದ್ದ ಸಿಂಗ್ ಅವರು ತಮ್ಮ ಬಳಿಯೇ ಉಟ್ಟುಕೊಂಡಿದ್ದರು. ಒಡಿಶಾದ ತಲಬಿರಾ-2ಬ್ಲಾಕ್ ಹಂಚಿಕೆ ಮಾಡುವಂತೆ ಕೋರಿ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರು 2005ರ ಮೇ7 ಮತ್ತು 17ರಂದು ಪ್ರಧಾನಿಗೆ ಪತ್ರ ಬರೆದಿದ್ದರು.

ಈ ವೇಳೆ ಕಲ್ಲಿದ್ದಲು ಸಚಿವಾಲಯ ಹಾಗೂ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಬೆಳವಣಿಗೆಗಳ ಕುರಿತ ಮಾಹಿತಿಗಾಗಿ ಸಿಬಿಐ ಅಧಿಕಾರಿಗಳು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!