ದೇಶ

ಉನ್ನಾವೋ ಪೊಲೀಸ್ ಕ್ಯಾಂಪಸ್‌ನಲ್ಲಿ 60 ಅಸ್ಥಿಪಂಚರ ಪತ್ತೆ!

Vishwanath S

ಉನ್ನಾವೋ(ಉತ್ತರಪ್ರದೇಶ): ಉತ್ತರಪ್ರದೇಶದ ಉನ್ನಾವೋ ಪೊಲೀಸ್ ಕ್ಯಾಂಪಸ್‌ನ ಕೊಠಡಿಯೊಂದರಲ್ಲಿ ಸುಮಾರು 60 ಮಾನವ ಅಸ್ಥಿಪಂಚರಗಳು ಪತ್ತೆಯಾಗಿವೆ.

ಈ ಅಸ್ತಿಪಂಚರಗಳು ಕ್ರಿಮಿನಲ್ ವಿಚಾರಣೆಗಾಗಿ ಬಳಸಲಾಗಿದ್ದ ಮಾನವ ದೇಹದ ಮೂಳೆಗಳಾಗಿದ್ದು ಇವುಗಳನ್ನು ಹಲವು ವರ್ಷಗಳಿಂದ ಸಂಗ್ರಹಿಸಲಾಗಿತ್ತು. ಪೋಸ್ಟ್ ಮಾರ್ಟಮ್ ಬಳಿಕ ದೇಹವನ್ನು ಅಂತ್ಯಕ್ರಿಯೆ ನಡೆಸದೆ ಕೊಠಡಿಯಲ್ಲಿ ಇರಿಸಲಾಗಿದ್ದು, ಈ ಕೊಠಡಿ ಪೊಲೀಸ್ ಆಸ್ಪತ್ರೆಯಾಗಿದ್ದು ಹಲವು ವರ್ಷಗಳಿಂದ ಬೀಗ ಜಡಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಸ್ಥಿಪಂಚರಗಳೆಲ್ಲ ಹಳೆಯದಾಗಿದ್ದು, ಅವುಗಳನ್ನು ಯಾಕೆ ಸರಿಯಾಗಿ ವಿಲೇವಾರಿ ಮಾಡಿಲ್ಲ ಎಂಬುದರ ಕುರಿತು ತನಿಖೆ ನಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಾನ್ಪುರ್ ಮತ್ತು ಉನ್ನಾವೋ ಬಳಿಯ ಪವಿತ್ರ ಗಂಗಾ ನದಿಯಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿದ್ದವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಮಧ್ಯೆ ಉನ್ನಾವೋ ಬಳಿಯೇ 60ಕ್ಕೂ ಹೆಚ್ಚು ಅಸ್ಥಿಪಂಚರಗಳು ಸಿಕ್ಕಿರುವುದು ಗಂಭೀರತೆ ಪಡೆದಿದೆ.

ಗಂಗಾ ನದಿ ನೀರು ಇಳಿಮುಖವಾಗಿದ್ದರಿಂದ ಅಂತಿಮ ಸಂಸ್ಕಾರಕ್ಕಾಗಿ ಗಂಗೇಯಲ್ಲಿ ಬಿಡಲಾಗಿದ್ದ ಮೃತದೇಹಗಳು ಇವು ಎಂದು ರಾಜ್ಯ ಆಡಳಿತ ಹೇಳಿತ್ತು. ಇದೇ ವೇಳೆ ನೂರಾರು ಮೃತದೇಹಗಳ ಪತ್ತೆಯಾಗಿರುವುದರ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿತ್ತು.

SCROLL FOR NEXT