ದೇಶ

ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಹುತಾತ್ಮ ಪಟ್ಟವೇಕೆ?

ನವದೆಹಲಿ: ಕಳೆದ ಏಪ್ರಿಲ್ ನಲ್ಲಿ ರಾಜಧಾನಿಯಲ್ಲಿ ನಡೆದ ಆಪ್ ರ್ಯಾಲಿಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನದ ರೈತನಿಗೆ ಹುತಾತ್ಮ ಪಟ್ಟ ನೀಡಿದ ದೆಹಲಿ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.

ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರೋಹಿಣಿ ಮತ್ತು ನ್ಯಾ.ಜಯಂತ್‍ನಾಥ್ ಈ ಬಗ್ಗೆ ಸರ್ಕಾರದಿಂದ ವಿವರಣೆ ಕೇಳಿದೆ. ``ಆತ್ಮಹತ್ಯೆ ಒಂದು ಅಪರಾಧ. ಅದನ್ನು ವೈಭವೀಕರಿಸುವುದು ಸರಿಯಲ್ಲ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಭೂಸ್ವಾಧೀನ ಮಸೂದೆ ಜಾರಿಯ ವಿರುದ್ಧ ಆಪ್ ನಡೆಸಿದ ರ್ಯಾಲಿಯಲ್ಲಿ ಏ.28ರಂದು ರಾಜಸ್ಥಾನದ ರೈತ ಗಜೇಂದ್ರಸಿಂಗ್ ಜಂತರ್‍ಮಂತರ್ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇನ್ನೂ ತನಿಖೆ ಜಾರಿಯಲ್ಲಿದೆ. ಆನಂತರ ಹುತಾತ್ಮ ಪಟ್ಟ ನೀಡಿದ ಆಪ್ ಸರ್ಕಾರದ ಕ್ರಮ ವಿರೋಧಿಸಿ ಮೇ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು.

SCROLL FOR NEXT