ನವದೆಹಲಿ: ಜಾಹಿರಾತುಗಳಿಗೆ 526 ಕೋಟಿ ಖರ್ಚು ಮಾಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹೋಲಿಸಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಪ್ರಚಾರದ ಗೀಳಿರುವಂತೆ ಅರವಿಂದ್ ಕೇಜ್ರಿವಾಲ್ ಗೂ ಸ್ವಂತ ಪ್ರಚಾರದ ಗೀಳಿದೆ. ಆದ್ದರಿಂದ ಜಾಹೀರಾತುಗಳಿಗಾಗಿ 526 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಅಜಯ್ ಕುಮಾರ್ ಆರೋಪಿಸಿದ್ದಾರೆ.
ದೆಹಲಿಯ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ ತನ್ನ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಜನರಿಗೆ ತಿಳಿಸಲು ರೇಡಿಯೋ ಜಾಹಿರಾತುಗಳಿಗೆ ಆಮ್ ಆದ್ಮಿ ಪಕ್ಷ 526 ಕೋಟಿ ರೂಪಾಯಿ ಖರ್ಚು ಮಾಡಿದೆ. ಜನಸಾಮಾನ್ಯರ ಹಣವನ್ನು ಜಾಹೀರಾತುಗಳಿಗಾಗಿ ವ್ಯರ್ಥಮಾಡುತ್ತಿರುವ ಕೇಜ್ರಿವಾಲ್ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್, ಕೇಜ್ರಿವಾಲ್ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹೋಲಿಸಿದೆ.
ಕೇಜ್ರಿವಾಲ್ ಸರ್ಕಾರ ವ್ಯರ್ಥ ಮಾಡಿರುವ ಹಣವನ್ನು ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತಹ ಜನಸಾಮಾನ್ಯಿಗೆ ಉಪಯೋಗವಾಗುವಂತಹ ಕೆಲಸಕ್ಕೆ ವಿನಿಯೋಗಿಸಬಹುದಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.