ಹೈದ್ರಾಬಾದ್: ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ರಾಜ್ಯ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿ ಮೌಲ್ಯದ ಬುಲೆಟ್ ಫ್ರೂಪ್ ಮರ್ಸಿಡಿಸ್ ಬೆಂಜ್ ಬಸ್ ಖರೀದಿ ಮಾಡಲಾಗಿದೆ.ಇಂದು ಬೆಳಗ್ಗೆ ಚಂಡಿಗಡದಿಂದ ಹೈದರಾಬಾದ್ ಗೆ ಬಸ್ ತರಲಾಯಿತು.
ನಮ್ಮ ಮುಖ್ಯಮಂತ್ರಿ ಸಾಮಾನ್ಯ ಜನರಂತೆ ರಾಜ್ಯ ರಸ್ತೆ ಸಾರಿಗೆ ಸಂಚಾರ ನಿಗಮದ ಬಸ್ ನಲ್ಲಿ ಸಂಚರಿಸಲು ಬಯಸಿದ್ದರು. ಹೀಗಾಗಿ ಬಸ್ ಖರೀದಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.
5 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ಬಸ್ ಐಷಾರಾಮಿ ಬಸ್ ಅಲ್ಲ, ಇದರಲ್ಲಿ ಒಂದು ಹಾಸಿಗೆ ಕೂಡ ಇಲ್ಲ. 12 ಸೀಟುಗಳಿರುವ ಬಸ್ ನಲ್ಲಿ ಸಿಎಂ ಹಾಗೂ ಅವರ ಕಚೇರಿಯ ಸಿಬ್ಬಂದಿ ಮಾತ್ರ ಸಂಚರಿಸಬಹುದಾಗಿದೆ. ಜೊತೆಗೆ ಚಲಿಸುತ್ತಿರುವ ಬಸ್ ನಲ್ಲಿ ಸಭೆ ಮಾಡಬಹುದಾಗಿದೆ.
ಬಸ್ ನಲ್ಲಿ ಬೆಡ್ ರೂಮ್ ಮಾಡುವುದನ್ನು ಸಿಎಂ ಚಂದ್ರಶೇಖರ್ ರಾವ್ ನಿರಾಕರಿಸಿದರು. ನಾಳೆಯಿಂದ ಮುಖ್ಯಮಂತ್ರಿಗಳು ಅಧಿಕೃತವಾಗಿ ಬಸ್ ನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.