ಸಾಂದರ್ಭಿಕ ಚಿತ್ರ 
ದೇಶ

ರೋಗ ತಡೆಗೆ ಡಿಎನ್ಎ ಸರಿಪಡಿಸಲು ಮುಂದಾದ ವೈದ್ಯರು

ಭವಿಷ್ಯದಲ್ಲಿ ರೋಗಗಳನ್ನು ತಡೆಯಲು ಮತ್ತು ಚಿಕಿತ್ಸೆ ನೀಡಲು ಡಿಎನ್ಎ ದುರಸ್ತಿ ಮಾಡುವ ವಿಧಾನವೊಂದನ್ನು ರಷ್ಯಾದ ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ.

ಮಾಸ್ಕೊ: ಭವಿಷ್ಯದಲ್ಲಿ ರೋಗಗಳನ್ನು ತಡೆಯಲು ಮತ್ತು ಚಿಕಿತ್ಸೆ ನೀಡಲು ಡಿಎನ್ಎ ದುರಸ್ತಿ ಮಾಡುವ ವಿಧಾನವೊಂದನ್ನು ರಷ್ಯಾದ ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ.

ಡಿಎನ್ಎ ಅಣುಗಳು ರಾಸಾಯನಿಕವಾಗಿ ಅತ್ಯಂತ ಅಸ್ಥಿರವಾಗಿರುತ್ತವೆ. ಇದರಿಂದಾಗಿ ವಿವಿಧ ರೀತಿಯ ಡಿಎನ್ಎ ಅಂಗಹಾನಿಗಳು ಸಂಭವಿಸುತ್ತವೆ.

ಈ ರೀತಿ ಡಿಎನ್ಎ ಅಂಗಹಾನಿ ಏಕಾಗುತ್ತದೆ ಎಂದು ಪತ್ತೆ ಮಾಡುವುದು ಅಗತ್ಯವಾಗಿದ್ದು, ಅದನ್ನು ದುರಸ್ತಿ ಮಾಡುವ ಮಾರ್ಗವನ್ನೂ ಪತ್ತೆ ಹಚ್ಚಬೇಕಾಯಿತು ಎಂದು ಈ ಸಂಶೋಧಕರ ತಂಡ ಹೇಳಿದೆ.

ಡಿಎನ್‌ಎ ಹಾನಿಯನ್ನು ದುರಸ್ತಿ ಮಾಡದೇ ಇದ್ದಲ್ಲಿ, ಅದರ ಛಿದ್ರೀಕರಣ ಹೆಚ್ಚಳ, ಕಣಗಳ ಸಾವು ಉಂಟಾಗಿ ವಿವಿಧ ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಮರೆಗುಳಿತನ (ಅಲ್ಜಿಮೀರ್) ಕಾಯಿಲೆ ಕೂಡ ಇಂತಹ ಡಿಎನ್ಎ ಹಾನಿಯ ಪರಿಣಾಮ ಎಂದು ಅವರು ಹೇಳಿದ್ದಾರೆ.

ನ್ಯೂಕ್ಲಿಯೋಸಮ್ಲೀ ಅಡಗಿದ ಬೇರೆ ಡಿಎನ್ಎ ಸರಪಣಿಯಲ್ಲಿನ ಚಿದ್ರತೆಗಳನ್ನು ದುರಸ್ತಿ ಮಾಡಬಹುದು ಎಂಬುದನ್ನು ಅಣುಗಳಲ್ಲಿ ಅಲ್ಪ ಬದಲು ಪ್ರಣಾಳದಲ್ಲಿ ಪ್ರಯೋಗ ಮಾಡಿ ನಾವು ಕಂಡುಕೊಂಡಿದ್ದೇವೆ ಎಂದು ಲೊಮಾನೊಸೊವ್ ಮಾಸ್ಕೊ ಸ್ಟೇಟ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಾಸಿಲಿ ಎಂ ಸ್ಟುಡಿಟ್ ಸ್ಕಿ ಹೇಳಿದ್ದಾರೆ.

ಪ್ರೊಟೀನ್‌ಗಳನ್ನು ಆವರಿಸಿದ ಡಿಎನ್ಎ ಸರಪಣಿ ಸಮುಚ್ಚಯವನ್ನು ನ್ಯೂಕ್ಲಿಯೋಸಮ್ ಎಂದು ಕರೆಯುತ್ತಾರೆ.

ಡಿಎನ್ಎಯನ್ನು ದುರಸ್ತಿ ಮಾಡುವ ಈ ವಿಧಾನವು ನರ ಕ್ಷೀಣಗೊಳ್ಳುವ ಕಾಯಿಲೆಗಳನ್ನು ತಡೆಯಲು ಹಾಗೂ ಅವುಗಳಿಗೆ ಚಿಕಿತ್ಸೆ ನೀಡುವಲ್ಲಿ ಹೊಸ ದಾರಿಯನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಿಯತಕಾಲಿಕದಲ್ಲಿ ಈ ಕುರಿತ ಲೇಖನ ಪ್ರಕಟಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT