ದೇಶ

ಗಂಡು ಮಗುವಿನ ಹಂಬಲಕ್ಕೆ ಹೆತ್ತಳು 14 ಹೆಣ್ಣು ಮಕ್ಕಳ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ದಂಪತಿಗಳಿಬ್ಬರು ಬರೊಬ್ಬರಿ 14 ಹೆಣ್ಣುಮಕ್ಕಳನ್ನು ಹೆತ್ತು ಸಲಹುವ...

ಧಾಹೋಡ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ದಂಪತಿಗಳಿಬ್ಬರು ಬರೊಬ್ಬರಿ 14 ಹೆಣ್ಣುಮಕ್ಕಳನ್ನು ಹೆತ್ತು ಸಲಹುವ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ.
ಧಾಹೋಡ್ ಜಿಲ್ಲೆಯ ಝಾರಿ ಬೂಜಿ ಎಂಬ ಹಳ್ಳಿಯ ರಾಮ್‌ಸಿನ್ ಸಾಂಗೋಡ್ ಮತ್ತು ಕಾನು ಎನ್ನುವ ಬಡ ರೈತ ದಂಪತಿಗಳು ಗಂಡು ಮಗು ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದು 14 ಹೆಣ್ಣುಮಕ್ಕಳನ್ನು ಹೆತ್ತಿರುವುದು ಈಗ ಸುದ್ದಿಯಾಗಿದೆ.
ವರ್ಷಕ್ಕೊಂದರಂತೆ 14 ಹೆಣ್ಣುಮಕ್ಕಳನ್ನು ಹೆತ್ತ ಮಹಾತಾಯಿ 33 ವರ್ಷದ ಕಾನು ಅಂತೂ ಕಳೆದ ವರ್ಷ ಗಂಡು ಮಗುವನ್ನು ಹೆತ್ತು ಸಂಭ್ರಮಿಸಿದ್ದಾಳೆ. 15 ಹೆತ್ತವಳಿಗೆ ಇನ್ನೊಂದು ಹೆಚ್ಚೆ ಎಂದು ಇದೀಗ ಇನ್ನೊಂದು ಗಂಡು ಮಗುವಿನ ವ್ಯಾಮೋಹದಿಂದ ಮತ್ತೆ ಗರ್ಭಿಣಿಯಾಗಿದ್ದಾಳೆ.
ಇನ್ನೊಂದು ಮಗುವೂ ಹೆಣ್ಣಾದರೆ ತೊಂದರೆ ಇಲ್ಲ ,ನಾವಿನ್ನೂ ಯೌವ್ವನ ಹೊಂದಿದ್ದೇವೆ , ಮತ್ತೂಮ್ಮೆ ಗಂಡು ಮಗುವಿಗಾಗಿ ಪ್ರಯತ್ನ ಮಾಡುತ್ತೇವೆ ಎಂದು 15 ಮಕ್ಕಳ ಅಪ್ಪ ರಾಮ್‌ಸಿನ್ ಹೇಳುತ್ತಾರೆ.
ನಾನು ಸಣಕಲು ಶರೀರದವಳೆಂದು ನನಗೆ ಗೊತ್ತಿದೆ. ಆದರೆ ನಾನು 7 ಬಾರಿ ಹೆಣ್ಣುಮಕ್ಕಳನ್ನು ಹೆತ್ತ ಬಳಿಕ ನನ್ನ ಪತಿ ಮುಂದಿನ ಬಾರಿ ಗಂಡು ಮಗು ಹೆರದಿದ್ದರೆ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದರು ನಾನೊಬ್ಬಳು ಅನಾಥೆ ಹೀಗಾಗಿ ಮಕ್ಕಳೊಂದಿಗೆ ಬೀದಿಗೆ ಬೀಳುವುದು ಬೇಡ ಎಂಬ ಕಾರಣಕ್ಕೆ ಮಕ್ಕಳನ್ನು ಹೆರುತ್ತಲೆ ಹೊದೆ ಎಂದು 9 ತಿಂಗಳ ಗರ್ಭಿಣಿ ಕಾನು ಹೇಳುತ್ತಾರೆ.
2013ರಲ್ಲಿ ದೇವರ ಅನುಗ್ರಹದಿಂದ ನಾನು ಮೊದಲ ಬಾರಿ ಗಂಡುಮಗುವಿಗೆ ಜನ್ಮನೀಡಿದ ಬಳಿಕ ಬಹಳ ಸಂಭ್ರಮವಾಗಿ ಆತನಿಗೆ ವಿಜಯ್ ಎಂದು ಹೆಸರಿಟ್ಟೆ. 14 ಮಂದಿ ಅಕ್ಕಂದಿರನ್ನು ಸಾಕಲು ಒಬ್ಬ ತಮ್ಮನಿಂದ ಸಾಧ್ಯವಿಲ್ಲ. ಹಾಗಾಗಿ ಇನ್ನೊಂದು ಗಂಡುಮಗುವಿಗಾಗಿ ಗರ್ಭಿಣಿಯಾಗಿದ್ದೇನೆ.ಈ ಬಾರಿಯೂ ಖಂಡಿತವಾಗಿ ಗಂಡುಮಗು ಆಗಲಿದೆ ಎನ್ನುವ ವಿಶ್ವಾಸ ನನ್ನದು ಎಂದು ಕಾನು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!