ದೇಶ

ಗ್ರೀಕ್ ಜನಾಭಿಪ್ರಾಯ: ಸಾಲ ಮರುಪಾವತಿಗೆ ಮತದಾನ ಆರಂಭ

Vishwanath S

ಅಥೆನ್ಸ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರೀಕ್‌ನಲ್ಲಿ ‘ಸಾಲ ಮರುಪಾವತಿ ಯೋಜನೆ’ ಸಂಬಂಧ ಜನಾಭಿಪ್ರಾಯ ಸಂಗ್ರಹಣೆಗಾಗಿ ಮತದಾನ  ಆರಂಭವಾಗಿದೆ.

ಗ್ರೀಕ್ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್ ‘ಜನ ಮತಗಣನೆಯಲ್ಲಿ ಸಾಲ ಮರುಪಾವತಿ ಯೋಜನೆಗೆ ‘ಇಲ್ಲ’ ಎನ್ನಿ’ ಎಂದು ಕರೆ ನೀಡಿರುವುದರಿಂದ ಗ್ರೀಕ್‌  ಜನರು ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿದ್ದು, ಸುಮಾರು 8.5 ಮಿಲಿಯನ್‌ ಜನರು ಮತ ಚಲಾವಣೆ ಮಾಡುವ ಅರ್ಹತೆ ಪಡೆದಿದ್ದಾರೆ ಎಂದು ಗ್ರೀಕ್‌ ಸಚಿವಾಲಯ ತಿಳಿಸಿದೆ.

ಸಾಲ ಮರುಪಾವತಿ ಪರ ವಿರೋಧದ ಎರಡು ಬಣಗಳು ಸೃಷ್ಟಿಯಾಗಿದ್ದು ಗ್ರೀಕ್‌ ಜನರಲ್ಲಿ ಒಡಕು ಮೂಡಿದೆ. ಜನಮತಗಣನೆಯಲ್ಲಿ ಗ್ರೀಕರು ಸಾಲ ಮರುಪಾವತಿ ಕುರಿತಂತೆ ಪರ ಮತ್ತು ವಿರೋಧವಾಗಿ ಮತ ಚಲಾಯಿಸುತ್ತಿದ್ದಾರೆ.

ಜನಮತಗಣನೆಗೆ  ಪೂರ್ವಭಾವಿಯಾಗಿ ಅಥೆನ್ಸ್‌ನಲ್ಲಿ ಶನಿವಾರ  ನಡೆದ ಮೆರವಣಿಗೆಯಲ್ಲಿ ಗ್ರೀಕ್ ಪ್ರಧಾನಿ ಮಾತನಾಡಿ ‘ಹಣಕಾಸು ಸಂಸ್ಥೆಗಳು ವಿಧಿಸುತ್ತಿರುವ ಷರತ್ತುಗಳ ವಿರುದ್ಧವಾಗಿ ನೀವು ಮತ ನೀಡಿ’ ಎಂದು  ಜನರಲ್ಲಿ ಆಗ್ರಹಿಸಿದರು.

SCROLL FOR NEXT