ಅಜ್ಮೇರ್ ಬಾಂಬ್ ಸ್ಫೋಟದ ಚಿತ್ರ 
ದೇಶ

ಅಜ್ಮೇರ್ ಸ್ಫೋಟ ಸಾಕ್ಷಿಗಳೂ ಉಲ್ಟಾ!

ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ...

ಜೈಪುರ/ನವದೆಹಲಿ: ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ. 2007ರ ಅಕ್ಟೋಬರ್‍ನಲ್ಲಿ ನಡೆದಿದ್ದ ಅಜ್ಮೇರ್ ಸ್ಫೋಟದಲ್ಲಿ ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಆರಂಭದಲ್ಲಿ ರಾಜಸ್ಥಾನದ ಉಗ್ರ ನಿಗ್ರಹ ಪಡೆ ತನಿಖೆ ಕೈಗೆತ್ತಿಕೊಂಡಿತ್ತಾದರೂ, ನಂತರದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ಪ್ರಕರಣ ವರ್ಗಾವಣೆ-ಗೊಂಡಿತ್ತು. ಆರ್‍ಎಸ್ ಎಸ್‍ನ ಮಾಜಿ ಕಾರ್ಯಕರ್ತರು ಮತ್ತು ಹಿಂದೂ ಮೂಲಭೂತವಾದಿಗಳು ಎನ್ನಲಾದ 12 ಜನರ ವಿರುದಟಛಿ ಎನ್‍ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು.

`` ಈ ಇಡೀ ಪ್ರಕರಣ ಈ ಸಾಕ್ಷಿಗಳ ಮೇಲೆ ನಿಂತಿದೆ. ಎಲ್ಲರೂ ಮ್ಯಾಜಿಸ್ಟ್ರೇಟ್ ಎದುರು ಸಾಕ್ಷಿ ನುಡಿದಿದ್ದರು. ಅದರೆ, ಈಗ ಪ್ರತಿಕೂಲ ಹೇಳಿಕೆ ನೀಡು- ತ್ತಿದ್ದಾರೆ,'' ಅಜ್ಮೇರ್ ಸ್ಫೋಟ ಪ್ರಕರಣದ ಸಹಾಯಕ ಸಾರ್ವಜನಿಕ ಅಭಿಯೋಜಕಿ ಆಶ್ವಿನಿ ಶರ್ಮಾ ಹೇಳಿದ್ದಾರೆ. ``ಎನ್ಐಎಯಿಂದ ಯಾವುದೇ ಒತ್ತಡ ಇಲ್ಲ,'' ಎಂದು ಆರಂಭದಲ್ಲಿ ಹೇಳಿದ್ದ ಸಾಕ್ಷಿಗಳು, 2014ರಿಂದ ಈಚೆಗೆ ಪ್ರತಿಕೂಲ ಹೇಳಿಕೆ ನೀಡಲು ಆರಂಬಿsಸಿದ್ದಾರೆ. 2015ರ ಮೇ ತಿಂಗಳಿಂದಾಚೆಗೆ ಎಲ್ಲರೂ ವ್ಯತಿರಿಕ್ತ ಸಾಕ್ಷಿ ನುಡಿದಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

SCROLL FOR NEXT