ಸುಪ್ರಿಂ ಕೋರ್ಟ್ 
ದೇಶ

ತಂದೆಯ ಹೆಸರು ಬಹಿರಂಗಪಡಿಸದೆ ಅವಿವಾಹಿತ ಮಹಿಳೆ ಮಗುವಿಗೆ ಗಾರ್ಡಿಯನ್ ಆಗಬಹುದು: ಸುಪ್ರೀಂ

ತಂದೆಯ ಅನುಮತಿ ಪಡೆಯದೇ ಹಾಗೂ ಮಗುವಿನ ತಂದೆಯ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸದೇ ಅವಿವಾಹಿತ ಮಹಿಳೆ...

ನವದೆಹಲಿ: ತಂದೆಯ ಅನುಮತಿ ಪಡೆಯದೇ  ಹಾಗೂ ಮಗುವಿನ ತಂದೆಯ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸದೇ ಅವಿವಾಹಿತ ಮಹಿಳೆ ಮಗುವಿಗೆ ಗಾರ್ಡಿಯನ್ ಆಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ತಂದೆಗೆ ಯಾವುದೇ ಸೂಚನೆ ನೀಡದೇ ಅವಿವಾಹಿತ ಮಹಿಳೆ ತನ್ನ ಮಗುವಿಗೆ ಗಾರ್ಡಿಯನ್ ಆಗಬಹುದೆಂದು  ನ್ಯಾಯಮೂರ್ತಿ ವಿಕ್ರಮ್ ಸೇನ್ ನೇತೃತ್ವದ ನ್ಯಾಯ ಪೀಠ ತಿಳಿಸಿದೆ.ಕೆಳನ್ಯಾಯಾಲಯ ಹಾಗೂ ಹೈಕೋರ್ಟ್ ಮಗುವಿನ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೇ ತೀರ್ಪು ನೀಡಿದ್ದವು ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.

ತನ್ನ ಮಗುವಿನ ಗಾರ್ಡಿಯನ್ ಶಿಪ್ ತೆಗೆದುಕೊಳ್ಳಲು  ಮಗುವಿನ ತಂದೆಯ ಗುರುತು ಹಾಗೂ ಅನುಮತಿ ಅವಶ್ಯಕತೆಯಿಲ್ಲವೆಂದು, ಸರ್ಕಾರಿ ಕೆಲಸದಲ್ಲಿರುವ ಅವಿವಾಹಿತ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಅಧೀನ ಹಾಗೂ ಉಚ್ಚ ನ್ಯಾಯಾಲಯಗಳು, ತಂದೆಯ ಅನುಮತಿ ಕಡ್ಡಾಯ ಎಂದು ತೀರ್ಪು ನೀಡಿದ್ದವು. ಈ ತೀರ್ಪಿನ ವಿರುದ್ಧ ಮಹಿಳೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪನ್ನು ಮರು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಗಾರ್ಡಿಯನ್ ಆಗಲು ತಂದೆಯ ಒಪ್ಪಿಗೆ ಅಗತ್ಯವಿಲ್ಲವೆಂದು ಮಹತ್ವದ ತೀರ್ಪು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT