ನವದೆಹಲಿ: ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆ(ಆರ್ ಟಿಐ) ಜಾರಿಗೆ ಬಂದು ಇದೇ ಅ. 2ಕ್ಕೆ ಹತ್ತು ವರ್ಷ ಪೂರೈಸಲಿದೆ. ಈ 10 ವರ್ಷಗಳಲ್ಲಿ ಅರ್ಜಿದಾರರು ಬಯಸಿದ ಮಾಹಿತಿಗಳು ಎಷ್ಟು ಲಭ್ಯವಾಗಿವೆಯೋ ಇಲ್ಲವೋ, ಆದರೆ 39 ಮಂದಿ ಆರ್ ಟಿಐ ಕಾರ್ಯಕರ್ತರು ಪಾರದರ್ಶಕ ಮಾಹಿತಿ ಬಯಸಿದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 275 ಮಂದಿ ಹಲ್ಲೆಗೊಳಗಾಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಬಗ್ಗೆ ``ಹಿಂದುಸ್ತಾನ್ ಟೈಮ್ಸ್ '' ಬುಧವಾರ ವರದಿ ಮಾಡಿದೆ. ಇತ್ತೀಚೆಗೆ ಆರ್‍ಟಿಐ ಕಾರ್ಯಕರ್ತ ಗುರುಪ್ರಸಾದ್ ಶುಕ್ಲಾ ತನ್ನ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಬಳಕೆಯಾಗಿರುವ ಹಣ ಮತ್ತಿತರ ವಿವರಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕಾಗಿ ಅಲ್ಲಿನ ಮುಖಂಡರು ಹಾಗೂ ಅವರ ಬೆಂಬಲಿಗ ರಿಂದ ಭೀಕರ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದೆ.