ಬಬೂಲ್ ಸುಪ್ರಿಯೋ 
ದೇಶ

ಹೇಮಮಾಲಿನಿಯಿಂದ ಘೋರ ಅಪರಾಧವಾಗಿದೆ: ಬಬೂಲ್ ಸುಪ್ರಿಯೋ

ನಟಿ ಹಾಗೂ ಬಿಜೆಪಿ ಸಂಸದೆ ಹೇಮಮಾಲಿನಿ ಕಾರಿಗೆ ಅಲ್ಟೋ ಕಾರು ಡಿಕ್ಕಿಯಾಗಿ ಬಾಲಕಿ ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ...

ನವದೆಹಲಿ: ನಟಿ ಹಾಗೂ ಬಿಜೆಪಿ ಸಂಸದೆ ಹೇಮಮಾಲಿನಿ ಕಾರಿಗೆ ಅಲ್ಟೋ ಕಾರು ಡಿಕ್ಕಿಯಾಗಿ ಬಾಲಕಿ ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಕೇಂದ್ರ ಬಿಜೆಪಿ ಸಚಿವರೊಬ್ಬರು ತಮ್ಮದೇ ಪಕ್ಷದ ಸಂಸದೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೇಮ ಮಾಲಿನಿಯಿಂದ ಗಂಭೀರವಾದ ಅಪರಾಧವಾಗಿದೆ ಎಂದು ಸಚಿವ ಬಬೂಲ್ ಸುಪ್ರಿಯೋ ಟೀಕಿಸಿದ್ದಾರೆ. ಬಾಲಕಿಯ ತಂದೆ ಟ್ರಾಫಿಕ್ ನಿಯಮ ಪಾಲಿಸಿದ್ದರೆ ಆಕೆ ಸಾಯುತ್ತಿರಲಿಲ್ಲ ಎಂದು ಹೇಮಮಾಲಿನಿ ಮಾಡಿದ್ದ ಟ್ವೀಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುಪ್ರಿಯೋ ಅಪಘಾತವಾದ ಸಂದರ್ಭದಲ್ಲಿ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಹೇಮ ಮಾಲಿನಿ ಆ ಕೆಲಸ ಮಾಡಿಲ್ಲ. ಇದು ಅವರಿಂದಾದ ಬಹು ದೊಡ್ಡ ತಪ್ಪು, ಈ ಸತ್ಯವನ್ನು ಅವರು ಒಪ್ಪಿಕೊಳ್ಳಬೇಕು ಎಂದು ಸುಪ್ರಿಯೋ ಕಿಡಿಕಾರಿದ್ದಾರೆ.

ಹೇಮಾ ಮಾಲಿನ ಮಾಡಿದ್ದ ಟ್ವೀಟ್ ಗೆ ಮೃತ ಬಾಲಕಿಯ ತಂದೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು. ಅಪಘಾತವಾದ ಸಂದರ್ಭದಲ್ಲಿ ತನ್ನ ಮಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುಳಿಯುತ್ತಿದ್ಧಳು ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ