ಕೈರೋ: ಕೈರೋದಲ್ಲಿನ ಇಟಲಿಯ ರಾಯಭಾರ ಕಚೇರಿಯ ಮುಂಭಾಗ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದಾನೆ.
ಸ್ಫೋಟದಿಂದಾಗಿ ರಾಯಭಾರ ಕಚೇರಿಗೆ ತೀವ್ರ ಹಾನಿಯಾಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ವಕ್ತಾರ ಹೊಸಮ್ ಅಬ್ದೇಲ್ ಗಫ್ಫರ್ ಹೇಳಿದ್ದಾರೆ.
ಬೆಳಿಗ್ಗೆ 6.30ರ ಸುಮಾರಿನಲ್ಲಿ ಕಟ್ಟಡದ ಹೊರ ಭಾಗ ಕಾರು ನಿಲುಗಡೆ ಸ್ಥಳದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕಾರಣವೇನು ಎಂದು ತಿಳಿದಿಲ್ಲ. ಸ್ಫೋಟ ಘಟನೆಯಿಂದಾಗಿ ಸದ್ಯ ರಾಯಭಾರ ಕಚೇರಿಯನ್ನು ಮುಚ್ಚಲಾಗಿದ್ದು, ಇನ್ನು ಯಾವುದೇ ಸಂಘಟನೆಗಳು ಸ್ಫೋಟದ ಹೊಣೆ ಹೊತ್ತಿಲ್ಲ ಎಂದು ತಿಳಿದುಬಂದಿದೆ.