ಕಾನ್ಪುರ್: ಉತ್ತರಪ್ರದೇಶದ ಕಾನ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಭಾವಚಿತ್ರವಿದ್ದ ಬ್ಯಾನರ್ ಮತ್ತು ಫೋಸ್ಟರ್ ಗಳಿಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ನಡೆದಿದೆ.
ಇಂದು ರಾಜ್ಯ ಬಿಜೆಪಿ ಮುಖಂಡರನ್ನು ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಧಾನಿ ಮೋದಿ, ಶಾ ಭಾವಚಿತ್ರ ಹೊಂದಿದ್ದ ಬ್ಯಾನರ್ಸ್, ಫೋಸ್ಟರ್ಸ್ ಹಾಕಲಾಗಿತ್ತು. ಆದರೆ ಕಿಡಿಗೇಡಿಗಳು ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಹಾಳಾಗಿರುವ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ತೆಗೆದು ಹೊಸ ಬ್ಯಾನರ್, ಫೋಸ್ಟರ್ ಅಂಟಿಸಲಾಗಿದೆ ಎಂದು ಬಿಜೆಪಿ ಘಟಕ ತಿಳಿಸಿದೆ.
ನಗರದ ಮಾಲ್ ರೋಡ್, ವಿಐಪಿ ರೋಡ್, ಜಾಮೌ ಸೇರಿದಂತೆ ಹಲವು ಸ್ಥಳಗಳಲ್ಲಿ ಹಾಕಲಾಗಿದ್ದ ಫೋಸ್ಟರ್, ಬ್ಯಾನರ್ ಗಳಲ್ಲಿ ಮೋದಿ ಮತ್ತು ಶಾ ಮುಖಕ್ಕೆ ಕಪ್ಪು ಬಣ್ಣ ಬಳಿದು ವಿರೂಪಗೊಳಿಸಿದ್ದರು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಂದ್ರ ಮೈಥಾನಿ ತಿಳಿಸಿದ್ದಾರೆ.