ದೇಶ

ಶ್ರೀನಗರದಲ್ಲಿ ಏಷ್ಯಾದ ಅತಿ ಉದ್ದದ ಇಫ್ತಾರ್ ಕೂಟ

Srinivas Rao BV

ಶ್ರೀನಗರ: ಪ್ರಕ್ಷುಬ್ಧ ವಾತಾವರಣಕ್ಕೆ ಹೆಸರಾಗಿರುವ ಕಾಶ್ಮೀರ ಕಣಿವೆಯಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಜಗದ್ವಿಖ್ಯಾತ ದಾಲ್ ನದಿಯ ದಡದಲ್ಲಿ ಸುಮಾರು 1.6 ಕಿ.ಮಿ ಉದ್ದದ ಇಫ್ತಾರ್ ಕೂಟ ನಡೆದಿರುವುದು ಏಷ್ಯಾದಲ್ಲೇ ಅತಿ ಉದ್ದದ ಇಫ್ತಾರ್ ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉದ್ಯಮಿಗಳ ಸಹಯೋಗದೊಂದಿಗೆ ಲೌಡ್ ಬೀಟಲ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಆಯೋಜಿಸಿದ್ದ  ಏಷ್ಯಾದ ಅತಿ ಉದ್ದದ ಇಫ್ತಾರ್ ಕೂಟದಲ್ಲಿ, 1000 ಕ್ಕೂ ಹೆಚ್ಚು ಅನಾಥರು ಭಾಗವಹಿಸಿದ್ದರು. ಇದಲ್ಲದೇ ಸುಮಾರು 3000 ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು.   

ಶಸ್ತ್ರಾಸ್ತ್ರ ಕಾಳಗದಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡವರು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.  ಈ ಬಗ್ಗೆ ಪ್ರತಿಕ್ರಿಯಿಸಿರುವ ಲೌಡ್ ಬೀಟಲ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ, ಅನಾಥ ಮಕ್ಕಳನ್ನು ಸಮಾಜದ ಭಾಗವನ್ನಾಗಿಸುವುದಕ್ಕೆ ಇಫ್ತಾರ್ ಕೂಟಕ್ಕೆ ಅವರನ್ನೂ ಆಹ್ವಾನಿಸಲಾಗಿತ್ತು, ಈ ರೀತಿಯಾದ ಕಾರ್ಯಕ್ರಮ ಈ ವರೆಗೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

SCROLL FOR NEXT