ಲಂಡನ್: ಆಫ್ಘಾನಿಸ್ತಾನದ ಮಾಜಿ ಕೇಂದ್ರ ಗುಪ್ತಚರ ಸಂಸ್ಥೆ ಪ್ರದೇಶದ ಬಳಿ ಆತ್ಮಾಹುತಿ ದಾಳಿಯಾದ ಪರಿಣಾಮ 33 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಆಫ್ಘಾನಿಸ್ತಾನದ ಮಾಜಿ ಕೇಂದ್ರ ಗುಪ್ತಚರ ಸಂಸ್ಥೆ ಪ್ರದೇಶದ ಬಳಿ ಕಾರುಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಾಹುತು ಬಾಂಬೊಂದನ್ನು ಸ್ಫೋಟಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ 33 ಮಂದಿ ಸಾವನ್ನಪ್ಪಿದ್ದು, 6 ಸಿಬ್ಬಂದಿಗಳು ಹಾಗೂ 4 ಮಂದಿ ನಾಗರೀಕರು ಸಾವನ್ನಪ್ಪದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವೇಳೆ ಯಾರೊಬ್ಬ ವಿದೇಶೀಯರು ಸಾವನ್ನಪ್ಪಿಲ್ಲ. ಸ್ಪೋಟದ ಹೊಣೆಯನ್ನು ಈ ವರೆಗೂ ಯಾವೊಂದು ಸಂಘಟನೆಗಳು ಹೊತ್ತಿಕೊಂಡಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ನಡೆಸಲಾತ್ತಿದೆ ಎಂದು ಹೇಳಲಾಗುತ್ತಿದೆ.